ರೋಗಿಗಳ ಗುಣಪಡಿಸುವಲ್ಲಿ ದಾದಿಯರ ಪಾತ್ರ ಅನನ್ಯ

Nurse
Published on

ಚಿತ್ರದುರ್ಗ: ರೋಗಿಗಳನ್ನು ಗುಣಪಡಿಸುವಲ್ಲಿ ಹಗಲಿರುಳು ಸೇವೆ ಮಾಡುವ ದಾದಿಯರ ಪಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯವಾಗಿದೆ ಎಂದು ಶ್ರೀ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಎಸ್‌ಜೆಎಂ ನರ್ಸಿಂಗ್ ಕಾಲೇಜಿನ ಬಿಚ್ಚುಗತ್ತಿ ಭರಮಣ್ಣನಾಯಕ ಸಭಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಶುಶ್ರೂಷಕರ ದಿನಾಚರಣೆ, ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರೋಗಿ ಮತ್ತು ವೈದ್ಯರ ನಡುವೆ ಸೇತುವೆಯಾಗಿ ಶುಶ್ರೂಷಕಿಯರು ಕೆಲಸ ಮಾಡುತ್ತಿದ್ದಾರೆ. ಕಲಿತ ವಿದ್ಯೆಯಿಂದ ಸಮಾಜಕ್ಕೆ ಒಳಿತಾಗಬೇಕು. ನೈಟಿಂಗೆಲ್, ಮದರ್ ಥೆರೆಸಾ ಶ್ರೇಷ್ಠರ ಸಾಲಿಗೆ ಸೇರಲು ಸೇವೆಯೇ ಪ್ರಮುಖ ಕಾರಣ. ಆದ್ದರಿಂದ ಸಂತೋಷದಿಂದಲೇ ಸೇವೆ ಮಾಡುವ ಮನೋಭಾವ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟರು.

ನಿರ್ವಹಣೆ ವಿಷಯದಲ್ಲಿ ನಾಗಲಕ್ಷ್ಮಿ-7ನೇ, ಸೈಕಾಲಜಿಯಲ್ಲಿ ಅಫಿಯಾ ಜೋಶಿ-10ನೇ ಹಾಗೂ ಸಿಇಟಿಯಲ್ಲಿ ಎಸ್.ಸುಮಯಾ ಬಾನು-10ನೇ ರ್ಯಾಂಕ್‌ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದು, ಇದೇ ವೇಳೆ ಸನ್ಮಾನಿಲಾಯಿತು.

ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ನಾರಾಯಣಮೂರ್ತಿ, ಎಸ್‌ಜೆಎಂ ನರ್ಸಿಂಗ್‌ ಕಾಲೇಜಿನ ಪ್ರಾಚಾರ್ಯೆ ಡಾ.ಸವಿತಾ, ಸಹಪ್ರಾಧ್ಯಾಪಕಿ ಕೋಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net