

ಚಿತ್ರದುರ್ಗ: ವೃತ್ತಿಪರ ನೈತಿಕತೆ,ನೈಪುಣ್ಯತೆ,ಸಹಾನೂಭೂತಿಯೊಂದಿಗೆ ರೋಗಿಗಳ ಆರೈಕೆ ಬದ್ಧತೆ ವೈದ್ಯರಲ್ಲಿ ಇರಬೇಕೆಂದು ಬಸವೇಶ್ವರ ವೈದ್ಯಕೀಯ ಕಾಲೇಜು ಡೀನ್ ಡಾ.ಜಿ.ಪ್ರಶಾಂತ್ ಹೇಳಿದರು. ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ, 2024ರ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ನೂತನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವೈಟ್‌ಕೋಟ್ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷಣಕ್ಕೆ ಕಾಲಿರಿಸಿರುವ ತಾವು,ಭವಿಷ್ಯದಲ್ಲಿ ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ತಮ್ಮ ಜವಾವ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವ ಹಿಸಬೇಕು. ವೈದ್ಯಕೀಯ ಕ್ಷೇತ್ರದ ನೈತಿಕ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳ ಬದ್ಧತೆಯ ಸಂಕೇತವಾಗಿ ಈ ಸಮಾರಂಭವನ್ನು ಏರ್ಪಡಿಸಲಾಗಿದೆ. ನು ರಿತ ವೈದ್ಯರಾಗಲು ಕಠಿಣ ಶ್ರಮ ಅಗತ್ಯ.ವೈದ್ಯಕೀಯ ಶಿಕ್ಷಣದ ಆರಂಭದಲ್ಲಿರುವ ತಾವಿಂದು ತಮ್ಮ ಮೇಲೆ ಭವಿಷ್ಯದಲ್ಲಿ ಸಮುದಾಯಕ್ಕೆ ಅ ತ್ಯುತ್ತಮ ಸೇವೆ ಸಲ್ಲಿಸುವ ಆಳವಾದ ಜವಾಬ್ದಾರಿ ಇದೆ ಎಂಬುದನ್ನು ಅರಿಯಬೇಕೆಂದರು. ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಿದ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.
ಉಪ ವೈದ್ಯಕೀಯ ಅಧೀಕ್ಷಕ ಡಾ.ಎಂ.ಆರ್.ನಾಗೇಂದ್ರಗೌಡ,ಡಾ.ಜಿ.ಎಂ.ಮಹೇಶ್,ಡಾ.ಪಾಟೀಲ್‌ಶ್ರೀಶ,ಡಾ.ಬಸವರಾಜ ವಿ.ಸವದಿ,ಡಾ. ಸುರೇಶ್ ವೈ.ಬೋಂದಾಡೆ,ಡಾ.ಎಚ್.ಎಂ.ವಿರೂಪಾಕ್ಷಪ್ಪ,ಡಾ.ಎಸ್.ಪಿ.ಬಸವನಾಥಪ್ಪ,ಡಾ.ಬಿ.ವಿ.ಶರತ್,ಡಾ.ಡಿ.ದಿವ್ಯಾ,ಡಾ.ಆಸ್ಫಿಯಾ ಅ ಫ್ರೀನ್,ಡಾ.ಎಚ್.ಕೆ.ಶ್ರೀಕೃಷ್ಣ,ಡಾ.ಎನ್.ಲಾವಣ್ಯ,ಡಾ.ನಿರ್ಮಲಾ ಜೆ.ದೇಶಪಾಂಡೆ,ಡಾ.ಡಿ.ಎಸ್.ಶುಭಾ,ಡಾ.ಆರ್.ಎಸ್.ದೀಪಕ್,ಡಾ.ಬಿ.ಧಾಮರಾಜ್,ಡಾ.ಆರ್.ರಾಮು,ಡಾ.ವಿ.ಭಾಗ್ಯ,ಡಾ.ಎಸ್.ವಿ.ಮಂಜುನಾಥ್‌ರಾವ್,ಡಾ.ಎಂ.ಯೋಗೇಂದ್ರ,ಡಾ.ವಿ.ಸಂಗೀತಾ,ಡಾ.ಯು. ಅಜಯ್ಶರ್ಮಾ ಮತ್ತಿತರರು ಇದ್ದರು.