

ಮಲ್ಲಮ್ಮನ ಬೆಳವಡಿ: ಗ್ರಾಮದ ರೈತ ಮಂಜುನಾಥ ತಹಸೀಲ್ದಾರ್ ಅವರು ಸಾವಯುವ ಕಳೆನಾಶಕ ಔಷಧ, ಕ್ರಿಮಿನಾಶಕ ಔಷದ ಹಾಗೂ ರೋಗ ನಿರೋಧಕ ಶಕ್ತಿಯುತ ಗೊಬ್ಬರ ಸಿದ್ಧಪಡಿಸಿರುವ ಕಾರ್ಯ ಶ್ಲಾನೀಯ ಎಂದು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಹೇಳಿದರು.
ಗ್ರಾಮದಲ್ಲಿ ರೈತ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಬೀಜ ನಿಗಮ ಹಾಗೂ ಐಸಿಎಆರ್ ಕೆಎಲ್ಇ ಕೃಷಿ ವಿಜ್ಞಾನ ಮತ್ತಿಕೊಪ್ಪ ಇವರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಯುವ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಇಲಾಖೆಯ ಚಂದ್ರಕಾಂತ ಮರಡಿ ಮಾತನಾಡಿ, ರೈತರು ಅಧಿಕವಾಗಿ ಸಾವಯುವ ಗೊಬ್ಬರ ಹಾಗೂ ಕ್ರಿಮಿನಾಶಕ ಔಷ-ಧ ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕ ಇಳುವರಿ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ. ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಡಾ.ಶಿವಾನಂದ ಹಿರೇಮಠ, ಧಾರವಾಡ ಅಗ್ರಿ ಕಾಲೇಜಿನ ಕೃಷಿ ವಿಜ್ಞಾನಿ ಡಾ.ಆರ್.ಮಂಜುನಾಥ, ಎಸ್.ಎಂ.ವಾರದ, ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಮಲ್ಲಸರ್ಜಗೌಡ. ಪಾಟೀಲ, ಬಸಯ್ಯಸ್ವಾಮಿ ವಿರಕ್ತಮಠ, ರೈತ ಮಂಜುನಾಥ ತಹಸೀಲ್ದಾರ, ಎಸ್.ಎ್.ಪೂಜೇರ ಸ್ವಾಗತಿಸಿದರು. ಬಾಬು ಖಂಡೋಜಿ ನಿರೂಪಿಸಿದರು.