ರೋಗದ ಲಕ್ಷಣ ಕಂಡಲ್ಲಿ ತಪಾಸಣೆ ಮಾಡಿಸಿಕೊಳ್ಳಿ

6 bk-3
ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸ್ತನ ಕ್ಯಾನ್ಸರ್ ಕುರಿತು ಬುಧವಾರ ಆಯೋಜಿಸಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಶಾಂತಾ ದುರ್ಗೆ, ಡಾ. ಸುಶೀಲಾಬಾಯಿ ಹೊಳಕುಂದೆ, ಡಾ.ಶಾಂತಲಿಂಗ ನಿಗ್ಗುಡಗಿ, ಡಾ.ಬಸವರಾಜ ಎವಲೆ ಇದ್ದರು.
Published on

ಬಸವಕಲ್ಯಾಣ: ಇಂದಿನ ಬಹಳಷ್ಟು ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸುತ್ತಿರುವುದು ಆತಂಕ ಮೂಡಿಸಿದೆ. ಈ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರಲ್ಲಿ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜನ ಜಾಗೃತಿ ಸಮಿತಿ ಅಧ್ಯಕ್ಷೆ ಡಾ. ಶಾಂತಾ ದುರ್ಗೆ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ಸ್ತನ ಕ್ಯಾನ್ಸರ್ ಕುರಿತು ಬುಧವಾರ ಆಯೋಜಿಸಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ತಾಜಾ ಇರುವ ಹಣ್ಣು ಹಂಪಲು, ತರಕಾರಿ ಹಾಗೂ ಯೋಗ, ವ್ಯಾಯಾಮ ಮಾಡುವುದರಿಂದ ಕ್ಯಾನ್ಸರ್ ರೋಗ ತಡೆಗಟ್ಟಬಹುದು ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಜಿಲ್ಲಾ ಸರ್ಜನ್ ಡಾ.ಸುಶೀಲಾಬಾಯಿ ಹೊಳಕುಂದೆ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಅವಶ್ಯಕ. ಹೀಗಾಗಿ ಆಹಾರ ಪದ್ಧತಿಯಲ್ಲಿ ಜಾಗೃತಿ ವಹಿಸುವ ಮೂಲಕ ಹಣ್ಣುಗಳು ಸೇವನೆ ಮಾಡಬೇಕು ಎಂದರು.

ಕಲಬುರಗಿಯ ತಜ್ಞ ವೈದ್ಯ ಡಾ.ಶಾಂತಲಿಂಗ ನಿಗ್ಗುಡಗಿ ಮುಖ್ಯ ಅತಿಥಿಗಳಾಗಿ ಕ್ಯಾನ್ಸರ್ ರೋಗದ ಬಗ್ಗೆ ವಿಸೇಷ ಉಪನ್ಯಾಸ ನೀಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಸವರಾಜ ಎವಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಭುವನೇಶ್ವರಿ, ಡಾ.ಸುವರ್ಣ, ಡಾ.ರೇಣುಕಾ, ಉಪನ್ಯಾಸಕರಾದ ಇಂದ್ರಜಿತ್ ರೆಡ್ಡಿ, ದೀಪಕ ಕಾಡಾದಿ, ಮಹದೇವ ದೇಗಾವ ಉಪನ್ಯಾಸಕಿಯರಾದ ಕು. ಅಶ್ವಿನಿ ಜಲದೆ, ಶಿಲ್ಪಾ ಬಿರಾದಾರ ಇತರರಿದ್ದರು.

ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ಸ್ವಾಗತಿಸಿದರು. ಕು. ನೇತ್ರ ವಿ. ನಿರೂಪಣೆ ಮಾಡಿದರು. ಕನ್ನಡ ಉಪನ್ಯಾಸಕ ಶಿವಕುಮಾರ ಕೊಲ್ಲೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net