ರೋಗ ಬೇರು ಸಮೇತ ಉಪಶಮನಕ್ಕೆ ಹೋಮಿಯೋಪಥಿ ಸಹಕಾರಿ

bkt-9-10
ಹೋಮಿಯೋಪಥಿಕ ದಿನಾಚರಣೆ ನಿಮಿತ್ತ ಬಾಗಲಕೋಟೆ ನಗರದಲ್ಲಿ ವಾಕ್ ಫಾರ ಹೋಮಿಯೋಪಥಿಕ ವಾಕಥಾನ್ ಜನರ ಗಮನ ಸೆಳೆಯಿತು.
Published on

ಬಾಗಲಕೋಟೆ: ಹೋಮಿಯೋಪಥಿ ಪ್ರಪಂಚಾದ್ಯAತ ಅತೀ ಹೆಚ್ಚು ಜನ ಉಪಯೋಗಿಸುವ ಎರಡನೇಯ ಅತೀ ದೊಡ್ಡ ವೈದ್ಯ ಪದ್ದತಿಯಾಗಿದೆ ಹಾಗೂ ರೋಗಗಳನ್ನು ಬೇರು ಸಮೇತ ಉಪಶಮನ ಮಾಡುವುದು ಹೋಮಿಯೋಪಥಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಽಕಾರಿ ಡಾ.ಮಂಜುನಾಥ.ಡಿ.ಎನ್ ಹೇಳಿದರು.

ನಗರದ ಬಿವಿವಿ ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಹೋಮಿಯೋಪಥಿ ದಿನ ಹಾಗೂ ಪಿತಾಮಹ ಡಾ.ಸ್ಯಾಮುಯನ್ ಹಾನಿಮನ್ ರ ೨೭೦ ನೇ ಜನ್ಮ ದಿನಾಚಾರಣೆ ಅಂಗವಾಗಿ ಬುಧವಾರ ಆಯೋಜಿಸಿದ ವಾಕಥಾನ್ - ವಾಕ್ ಫಾರ್ ಹೋಮಿಯೋಪಥಿಗೆ ಹಸಿರು ಧ್ವಜ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಹೋಮಿಯೋಪಥಿಕ ಅತ್ಯುತ್ತಮ ವೈದ್ಯ ಉಪಚಾರ ಪದ್ಧತಿಯಾಗಿದ್ದು, ರೋಗಗಳನ್ನು ಬೇರು ಸಮೇತ ಉಪಶಮನ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದರಿಂದ ಜಗತ್ತಿನಲ್ಲಿ ಅತಿ ಹೆಚ್ಚು ಜನ ಹೋಮಿಯೋಪಥಿಕ ಅನುಸರಿತ್ತಿದ್ದಾರೆ. ಬಿವಿವಿ ಸಂಘ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಈ ಪದ್ದತಿ ಬಗ್ಗೆ ಜಾಗೃತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಆಯುಷ್ಯ ಅಽಕಾರಿ ಡಾ.ಎಸ್.ಜಿ.ಮಠ ಮಾತನಾಡಿ, ಸಾಂಕ್ರಾಮಿಕ - ಅಸಾಂಕ್ರಾಮಿಕ ರೋಗಗಳ ಹತೋಟಿಯಲ್ಲಿ ಆಪದ್ಭಾವನಂತಿರುವ ಹೋಮಿಯೋಪಥಿ ಔಷÀಧಗಳನ್ನು ಸಮಾಜದ ಕಡೆಯ ಪ್ರಜೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಆಯುಷ ವೈದ್ಯರು ಮಾಡಬೇಕು ಎಂದು ತಿಳಿಸಿದರು.

ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಪ್ರಾರಂಭಿಸಿರುವ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಲ್ಲ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳಿವೆ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯ ಡಾ.ಅರುಣ ಹೂಲಿ, ಪ್ರಾಧ್ಯಾಪಕರಾದ ಡಾ.ರವಿ.ಕೋಟೆಣ್ಣವರ, ಡಾ. ಅಮರೇಶ ಬಳಗಾನೂರ, ಡಾ.ರುದ್ರೇಶ ಕೊಪ್ಪಳ, ಡಾ.ವಿ.ಎಸ್.ಸಂಕೇಶ್ವರಿ, ಡಾ.ಅಖಿಲಾ ಹುಲ್ಲೂರ, ಡಾ.ವಿಜಯಲಕ್ಷಿ÷್ಮÃ. ಎ.ಎಫ್.ಐ ಸಂಘಟನೆಯ ಪದಾಽಕಾರಿಗಳಾದ ಡಾ.ಎಸ್.ಎನ್.ಬಾಲರೆಡ್ಡಿ. ಡಾ. ಚಂದ್ರಶೇಖಕ ಕಿರಗಿ, ಡಾ.ನಾಗರಾಜ ಬೇವರಗಿ, ಡಾ.ಶಿವಪ್ರಕಾಶ ಅಯ್ಯನಗೌಡರ, ಡಾ.ವಿ.ಸಿ.ಹಿರೇಮಠ ಉಪಸ್ಥಿತರಿದ್ದರು. ಸೃಷ್ಠಿ ತೋಟದ ಸ್ವಾಗತಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net