

ದೋರನಹಳ್ಳಿ: ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲು ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಹೇಶ ಬಿರಾದಾರ ಹೇಳಿದರು.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಮಹಿಳಾ ನೌಕರರ ಸಂಘ, ಸಿಎಚ್‌ಸಿ, ಗ್ರಾಪಂ ಮತ್ತು ಸರ್ಕಾರಿ ಪ್ರೌಢಶಾಲಾ ಹಳೇ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ರೋಗ ಬರುವ ಮುನ್ನ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ ಎಂದರು.
ರಕ್ತದ ಒತ್ತಡದಿಂದ ಲಕ್ವ, ಹೃದಯಾಘಾತದಂತ ಗಂಭೀರ ಸಮಸ್ಯೆ ಕಾಡುತ್ತವೆ. ಆರೋಗ್ಯ ತಪಾಸಣೆಯಿಂದ ಈ ರೋಗಗಳನ್ನು ಹತ್ತಿಕ್ಕಬಹುದು. ಮಹಿಳೆಯರಿಗೆ ಕಚೇರಿ, ಮನೆ ಎರಡು ಕಡೆ ಕೆಲಸ ಇರುತ್ತದೆ. ಈ ಒತ್ತಡದ ಬದುಕಿನಲ್ಲಿ ನಿರ್ವಹಣೆ ಬಹಳ ಮುಖ್ಯ. ಅಷ್ಟು ಒತ್ತಡಗಳ ಮಧ್ಯೆ ಕೆಲಸ ಮಾಡುವ ಮಹಿಳೆಯರೆ ಪುರುಷರಿಗಿಂತ ಶಕ್ತಿಶಾಲಿಯಾಗಿದ್ದಾರೆ. ವೈಯಕ್ತಿಕ ನಿರ್ವಹಣೆ, ಕೌಟುಂಬಿಕ ನಿರ್ವಹಣೆ, ವೃತ್ತಿ ನಿರ್ವಹಣೆ, ಧಾರ್ಮಿಕ ನಿರ್ವಹಣೆ, ದೈಹಿಕ ನಿರ್ವಹಣೆ ಬಹುಮುಖ್ಯವಾಗಿದೆ. ಹೀಗಾಗಿ ಇವುಗಳ ನಿರ್ವಹಣೆಯಿಂದ ನಮ್ಮ ಆರೋಗ್ಯವನ್ನು ಹತೋಟಿಯಲ್ಲಿಡಲು ಸಾಧ್ಯ ಎಂದರು.
ಹೃದಯ ರೋಗ ತಜ್ಞ ಡಾ.ಅರುಣ ಸಿದ್ರಿ ಮಾತನಾಡಿ, ಹೃದಯಾಘಾತವಾಗಲು ರಕ್ತ ಚಲನೆಯ ಕೊರತೆ. ಹೃದಯಕ್ಕೆ ಮೂರು ರಕ್ತನಾಳಗಳಿದ್ದು, ಅವುಗಳು ಸರಿಯಾದ ರೀತಿಯಲ್ಲಿ ಇರಬೇಕು. ಊಟದ ಪದ್ಧತಿ ಬದಲಾವಣೆಯೇ ಇದಕ್ಕೆ ಮೂಲ ಕಾರಣ. ಎದೆ ಉರಿ, ಎದೆ ನೋವು, ಎಡಗೈ ಭುಜ ನೋವು, ಆಗಾಗ್ಗೆ ದೇಹ ನೀರು ಬಿಡುವುದು ಅಂತಹ ಸಂದರ್ಭದಲ್ಲಿ ತಡ ಮಾಡದೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಸ್ತಿçÃರೋಗ ತಜ್ಞೆ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಗುತ್ತೇದಾರ್ ಮಾತನಾಡಿ, ಸ್ತನ ಕ್ಯಾನ್ಸರ್ ವಾಕ್ಸಿನ್ ಹಾಕುವ ಮೂಲಕ ತಡೆಗಟ್ಟಬಹುದು. ರಾಜ್ಯದಲ್ಲಿ ೧೩ ಸಾವಿರ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ೨೫೦೦ ಮಹಿಳೆಯರು ಈಗ ಜೀವತ್ಯಾಗ ಮಾಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಬಹು ಮಾರಕ. ಗರ್ಭಕೊರಳು ಇದ್ದು ಅಲ್ಲಿ ಸೋಂಕು ಉಲ್ಬಣವಾದರೆ ಅದು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಆಧಾರದ ಮೇಲೆ ಅದು ವಾಸಿಯಾಗಬಹುದು ಇಲ್ಲವೇ ಕ್ಯಾನ್ಸರ್ ಆಗಿ ಬದಲಾಗಲು ಸಾಧ್ಯವಿದ್ದು, ಹೀಗಾಗಿ ಎಚ್ಚರ ವಹಿಸಬೇಕು ಎಂದು ಹೇಳಿದರು. ಪ್ರಸೂತಿ ತಜ್ಞೆ ಡಾ.ನೀಲಾಂಬಿಕ ಮಾತನಾಡಿ, ಧೂಮಪಾನ, ಮದ್ಯ ಸೇವನೆ, ಪ್ಲಾಸ್ಟಿಕ್ ಬಳಕೆಯಿಂದಲೂ ಕ್ಯಾನ್ಸರ್ ಬರಬಹುದು. ಸ್ತನ ಕ್ಯಾನ್ಸರ್ ಬರುವ ಮುನ್ನ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಸರ್ಕಾರಿ ಮಹಿಳ:ಆ ಸಂಘದ ಜಿಲ್ಲಾಧ್ಯಕ್ಷೆ ಚಂದ್ರಕಲಾ ಗೂಗಲ್, ತಾಪಂ ಇಒ ಬಸವರಾಜ ಶರಬೈ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ದೊರೆ, ಹಿರಿಯ ಆರೋಗ್ಯ ಅಧಿಕಾರಿ ಸಂಗಣ್ಣ ನುಚ್ಚಿನ್, ಗ್ರಾಪಂ ಕಾರ್ಯದರ್ಶಿ ದೇವೆಂದ್ರಪ್ಪ, ಮಹಿಳಾ ಸಂಘದ ಗೌರವ ಸಲಹೆಗಾರರಾದ ಇಂದಿರಾ ಬಡಿಗೇರ, ಪತ್ರಕರ್ತರ ಸಂಘದ ತಾಲೂಕು ಅಧ್ಯP್ಷÀ ಮಲ್ಲಿಕಾರ್ಜುನ ಮುದನೂರ, ಹಳೆ ವಿದ್ಯಾರ್ಥಿಗಳ ಸಂಘದ ಪ್ರಮುಖರಾದ ಅಮರೀಶ ಗೋಲಗೇರಿ, ಹಯ್ಯಾಳಪ್ಪ ಗುಂಟನೂರ, ಮರಿಲಿಂಗ ಕೌದಿ,ಯಮನಪ್ಪ ಮುಕುಡಿ, ದೇವೆಂದ್ರಪ್ಪ ಮಲಗೊಂಡ, ದಶವಂತ್ ದೊರೆ, ಮಂಜುನಾಥ ಕಂಚಗಾರ, ಮಹೇಶ ಪತ್ತಾರ, ಅಮರ ಘನಾತೆ, ಸಾಗರ ಇತರರಿದ್ದರು. ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ತಪಾಸಣೆ ಮಾಡಲಾಯಿತು.