

ಚಿತ್ರದುರ್ಗ: ಕಾಯಿಲೆಗೆ ತುತ್ತಾದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮವೆಂದು ರೋಟರಿ ಕ್ಲ ಬ್ ಅಸಿಸ್ಟೆಂಟ್‌ಗೌರ‌್ನರ್ ಗಾಯತ್ರಿ ಶಿವರಾಂ ಹೇಳಿದರು.
ರೋಟರಿ ಕ್ಲಬ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನ ಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ವ್ಯಾಯಾಮ ಕಡಿಮೆಯಾಗಿ,ಯ ಂತ್ರಗಳ ಅವಲಂಬನೆ ಹೆಚ್ಚಾಗಿದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದು,40 ವರ್ಷ ವಯಸ್ಸು ದಾಟಿದ ಬ ಳಿಕ ಪ್ರತಿ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ರೂಢಿಸಿಕೊಳ್ಳ ಬೇಕಿದೆ.
ರೋಟರಿ ಕ್ಲಬ್ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಪ್ರಯತ್ನಿಸುತ್ತಿದೆ. ಶಿಕ್ಷಣಕ್ಕೆ ಪೂರಕ ನೆರ ವು ನೀಡುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕತೆ ಆಹಾರಕ್ಕೆ ವ್ಯವಸ್ಥೆ ಮಾಡುತ್ತಿದೆ ಎಂದರು. ಸಪ್ತಗಿ ರಿ ಆಸ್ಪತ್ರೆ ವೈದ್ಯ ಡಾ.ನಿಷಾನ್ ಮಾತನಾಡಿ,ಅಗತ್ಯ ಇದ್ದವರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು.
ಹೃದ್ರೋಗ,ನರರೋಗ,ಕ್ಯಾನ್ಸರ್,ಮೂತ್ರಪಿಂಡದ ಕಲ್ಲು ಕಾಯಿಲೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಯಿತು. ವೈದ್ಯರಾದ ಡಾ. ಹನುಮಂತಯ್ಯ,ಡಾ.ಅರುಣ್,ಡಾ.ಸುಶ್ಮಿತಾ,ಡಾ.ಇಂದು, ಶಿಬಿರದ ಸಂಚಾಲಕ ರಾಘವೇಂದ್ರ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಕನಕರಾಜು,ಕಾರ‌್ಯದರ್ಶಿ
ಜಯಶ್ರೀಷಾ,ವಿಕ್ರಾಂತ್‌ಜೈನ್,ವೀರಭದ್ರಸ್ವಾಮಿ,ಎಸ್.ವೀರೇಶ್,ಶಿವರಾಂ,ತರುಣಾ ಷಾ,ಚಂದ್ರಮೋಹನ್ ಮತ್ತಿತರರು ಇದ್ದರು. 200ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ಮಾಡಲಾಯಿತು.