ರೋಗ ನಿರೋಧಕ ಶಕ್ತಿಗೆ ಆಯುಷ್ ಇಲಾಖೆ ಔಷಧ ಉತ್ತಮ

CTD DR.CHANDRAKANT NAGASAMUDRA-------
Published on

ಚಿತ್ರದುರ್ಗ: ಆಯುಷ್ ಇಲಾಖೆ ಚ್ಯವನ್‌ಪ್ರಾಶ್ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ,ಯಾವುದೇ ರೋಗ ವಾಸಿಯಾಗಲು ಸಹಕರಿಸುತ್ತ ದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಹೇಳಿದರು.

ಬುದ್ಧನಗರದ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಶಾ ಮಾಸಿಕ ಸಭೆಯಲ್ಲಿ ಕ್ಷಯರೋಗ ನಿಯಂತ್ರಣಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ಫಲಾನುಭವಿಗಳಿಗೆ ಆಯುಷ್ ಪುಷ್ಠಿಕರ ಔಷಧ ಚ್ಯವನ್ ಪ್ರಾಶ್ ವಿತರಿಸಿ ಮಾತನಾಡಿ, ಕ್ಷಯರೋಗಿಗಳಿಗೆ ಚ್ಯವನ ಪ್ರಾಶ್ ಉತ್ತಮ ಪೂರಕ ಔಷಧ. ಆರೋಗ್ಯ ಇಲಾಖೆ ಮಾತ್ರೆಗಳ ಜತೆಗೆ ಇದನ್ನೂ ಸೇವಿಸುವುದರಿಂದ ಶೀಘ್ರ ಗುಣಮುಖ ಹೊಂದಬಹುದು ಎಂದರು.

ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ,ಎಲ್ಲ ವೈದ್ಯ ಪದ್ಧತಿಗಳು ಕೈ ಜೋಡಿಸಿ ಸಂಯುಕ್ತವಾಗಿ ಪ್ರಯತ್ನಿಸಿದಾಗ ಸ ಮುದಾಯದಲ್ಲಿ ಉತ್ತಮ ಆರೋಗ್ಯ ನೀಡಲು ಸಾಧ್ಯ. ಚ್ಯವನ್ ಪ್ರಾಶ್ ಕ್ಷಯ ರೋಗಿ ಗಳಿಗೆ ಶಕ್ತಿ ನೀಡುತ್ತದೆ ಹಾಗೂ ಪೂರಕ ಪೋಷ ಕಾಂಶಗಳನ್ನು ಒದಗಿಸಿ ಶೀಘ್ರ ಗುಣಮುಖರಾಗಲು ಸಹಕರಿಸುತ್ತದೆ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಶ್ರೀನಿವಾಸಮೂರ್ತಿ, ಕ್ಷಯರೋಗ ನಿಯಂತ್ರಣ ಕಚೇರಿಯ ನಂದನ್,ಎಸ್‌ಟಿಎಸ್ ನಾ ಗರಾಜ್,ಟಿಬಿಎಚ್‌ವಿ ಸಂತೋಷ್,ಲೋಕೇಶ್,ಫಾರ್ಮಸಿ ಅಧಿಕಾರಿ ಭೂತರಾಜ್,ಆರೋಗ್ಯ ನಿರೀಕ್ಷಣಾಧಿಕಾರಿ ಕೋಟೇಶ್ ಚಕ್ರವರ್ತಿ, ಅರೋಗ್ಯ ಇಲಾಖೆ ಕೇಶವ, ರೇಖಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net