

ಅರಟಾಳ: ಮಳೆಗಾಲ ಆರಂಭವಾಗಿ ಭೂಮಿ ಹಚ್ಚಹಸಿರಾಗಿದ ಸಂದರ್ಭದಲ್ಲಿ ಎಲ್ಲ ಕುರಿಗಾಹಿಗಳು ಸೇರಿ ಗ್ರಾಮದ ಶ್ರೀ ಮಾಳಿಂಗೇಶ್ವರ, ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ ಎಂದು ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ ಹೇಳಿದರು.
ಗ್ರಾಮದಲ್ಲಿ ಕುರಿಗಾಹಿಗಳು ಸೇರಿ ಶ್ರೀ ಮಾಳಿಂಗೇಶ್ವರ ಹಾಗೂ ಶ್ರೀ ದುರ್ಗಾದೇವಿಗೆ ಹಸರಾಂಬಲಿ ಅರ್ಪಿಸುವ ನಿಮಿತ್ತ ಕುರಿ ಓಡಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಯಲ್ಲಪ್ಪ ಹಟ್ಟಿ, ಸತ್ಯಪ್ಪ ಪೂಜಾರಿ, ಅಣ್ಣಪ್ಪ ಕಾಂಬಳೆ, ಮಹಾದೇವ ಡಂಗಿ, ಹಣಮಂತ ಪೂಜಾರಿ, ಶ್ರೀಶೈಲ ಪೂಜಾರಿ, ಹಣಮಂತ ಹಟ್ಟಿ, ವಿಠ್ಠಲ ಪೂಜಾರಿ, ಸಿದ್ದಪ್ಪ ಹಟ್ಟಿ, ಸಂಗಪ್ಪ ಅರ್ಜುಣಗಿ, ಮಾಳಪ್ಪ ಕಾಂಬಳೆ ಇತರರು ಇದ್ದರು.