

ಗದಗ: ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು, ಪರಸ್ಪರ ಅಂತರ ಪಾಲನೆಯಿಂದ ಮಾತ್ರವೇ ಕರೊನಾ ಸೋಂಕು ಹರಡುವುದನ್ನು ತಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ ತಯಾರಿಸಿದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೆದ ಕಷಾಯಪುಡಿ, ಹೋಮಿಯೋಪಥಿ ಔಷಧಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಶನಿವಾರ ವಿತರಿಸಿ ಅವರು ಮಾತನಾಡಿದರು.
ವಿಶ್ವದ ವಿವಿಧ ದೇಶಗಳಲ್ಲಿ ಕರೊನಾ ರೋಗಕ್ಕೆ ಔಷಧಗಳನ್ನು ಕಂಡುಹಿಡಿಯಲು ಸಂಶೋಧನೆಗಳು ನಡೆದಿವೆ. ಆದರೆ, ಇದುವರೆಗೂ ನಿಖರ ಔಷಧ ದೊರೆತಿಲ್ಲ. ಈ ಮಹಾಮಾರಿ ತಡೆಯಲು ಜನರು ಪರಸ್ಪರ ಅಂತರ ಪಾಲನೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ. ಈ ದಿಸೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೆದ ಕಷಾಯಪುಡಿ, ಹೋಮಿಯೋಪಥಿ ಔಷಧ ತಯಾರಿಸಿದೆ. ಇವುಗಳನ್ನು ಕಂದಾಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ನಿಯಮಿತವಾಗಿ ಸೇವಿಸಬೇಕು ಎಂದರು.
ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಕರೊನಾ ತಡೆಯಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯುಷ್ ಇಲಾಖೆ ಆಯುರ್ವೆದ ಕಷಾಯಪುಡಿ ವಿತರಿಸಿಲ್ಲ. ಆದರೆ, ಆಯುಷ್ ಗದಗ ಜಿಲ್ಲಾ ಅಧಿಕಾರಿ ಡಾ. ಸುಜಾತಾ ಪಾಟೀಲ ಸೋಂಕುಪೀಡಿತ ಪ್ರದೇಶಗಳಲ್ಲಿ ಆಯುರ್ವೆದ ಕಷಾಯಪುಡಿ, ಹೋಮಿಯೋಪಥಿ ಔಷಧಗಳನ್ನು ವಿತರಿಸಿದ್ದಾರೆ ಎಂದರು.
ಜಿಪಂ ಸಿಇಒ ಡಾ. ಕೆ. ಆನಂದ ಮಾತನಾಡಿ, ಆಯುಷ್ ಇಲಾಖೆ ರೂಪಿಸಿದ ಆಯುರ್ವೆದ ಕಷಾಯಪುಡಿ, ಚವನ್0ಪ್ರಾಶ, ಹೋಮಿಯೋಪಥಿ ಔಷಧಗಳು ಕರೊನಾ ರೋಗದಿಂದ ಸಂಪೂರ್ಣ ಗುಣಪಡಿಸದಿದ್ದರೂ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದರು.
ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಸಂಜೀವ ನಾರಪ್ಪನವರ, ಡಾ. ಮಹೇಶ ಹಿರೇಮಠ, ಡಾ. ಪ್ರವೀಣ ಸರ್ವದೆ, ಎಫ್ಡಿಸಿ ಸುಧಾತಾಯಿ ಜಾಲಿಹಾಳ, ಇತರರಿದ್ದರು.
EndFragment