ರೈಲ್ವೆ ಸೌಲಭ್ಯಕ್ಕೆ ಪ್ರಯತ್ನ ಅಚಲ

2
Published on

ಯರಗಟ್ಟಿ: ಸವದತ್ತಿ ಯಲ್ಲಮ್ಮ ಭಕ್ತರ ಅನುಕೂಲಕ್ಕಾಗಿ ಹೊಸ ರೆಲು ನಿರ್ಮಾಣ ಕುರಿತು ಕೇಂದ್ರ ರೆಲ್ವೆ ಸಚಿವರ ಗಮನ ಸೆಳೆದಿದ್ದು, ಪ್ರಯತ್ನ ಮುಂದುವರಿದಿದೆ ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಇಲ್ಲಿನ ಮಹಾಂತ ದುರದುಂಡೀಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ವಿಶೇಷ ಶಿವಾನುಭವ ಹಾಗೂ ದಾನಮ್ಮದೇವಿ ಬೆಳ್ಳಿ ಕಿರೀಟಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗಾವಿ, ಚನ್ನಮ್ಮನ ಕಿತ್ತೂರು, ಧಾರವಾಡ ಮಧ್ಯದ ರೈಲ್ವೆ ಕಾಮಗಾರಿ ತ್ವರಿತವಾಗಿ ಮಾಡುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ ಜಿಲ್ಲೆ ಅಭಿವೃದ್ಧಿ ಕುರಿತು ದಿ. ಸುರೇಶ ಅಂಗಡಿ ಕಂಡ ಕನಸುಗಳನ್ನು ನನಸು ಮಾಡಲು ಸತತ ಪ್ರಯತ್ನಿಸುತ್ತೇನೆ ಎಂದರು.

ಕಟಕೋಳದ ಸಚ್ಚಿದಾನಂದ ಸ್ವಾಮಿಗಳು ಮಾತನಾಡಿ, ದ್ವೇಷ ಅಸೂಯೆ ಇಲ್ಲದೆ ಸಮಾಜ ಕಟ್ಟಿದ ಅಣ್ಣ ಬಸವ ಅನುಭವ ಮಂಟಪದ ಮೂಲಕ ಉತ್ತಮ ಆಡಳಿತ ನೀಡಿ ಆದರ್ಶವಾದರು ಎಂದರು. ಉಮಾದೇವಿ ಪೂರ್ವಿಮಠ ಅಧ್ಯತೆ ವಹಿಸಿದ್ದರು. ಡಾ.ಬಿ.ಐ. ಚಿನಗುಡಿ ಉಪನ್ಯಾಸ ನೀಡಿದರು. ನ್ಯಾಯಾಧೀಶೆ ಸವಿತಾ ಪಟ್ಟಣಶೆಟ್ಟಿ, ಬ್ರಿಗೇಡಿಯರ್​ ಡಿ.ಎಂ. ಪೂರ್ವಿಮಠ, ಎ.ಎಂ. ಹಾದಿಮನಿ, ಮಹಾಂತೇಶ ಜಕಾತಿ, ಸುಮಿತ್ರಾ ಹಿರೇಮಠ, ಗಿರಿಜಾ ಜಕಾತಿ, ಸುಮಂಗಲಾ ಬಾಳಿ, ಶಿವಾನಂದ ಪಟ್ಟಣಶೆಟ್ಟಿ, ಪೂರ್ಣಿಮಾ ಕತ್ತಿಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net