ರೈಲ್ವೆ ಮೇಲ್ಸೆತುವೆ ಕಾಮಗಾರಿ ಪರಿಶೀಲನೆ

25gbd23
Published on

ಗೌರಿಬಿದನೂರು: ನಗರದ ಎಪಿಎಂಸಿ ಬಳಿ ಬೆಂಗಳೂರು ಮುಖ್ಯ ರಸ್ತೆಯಿಂದ ಹಿಂದುಪುರ-ಚಿಕ್ಕಬಳ್ಳಪುರ ಮುಖ್ಯ ರಸ್ತೆ ತಲುಪಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿರುವ ವರ್ತುಲ ರಸ್ತೆ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಸೋಮವಾರ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಪರಿಶೀಲಿಸಿದರು.

ವರ್ತುಲ ರಸ್ತೆಯು ಬೆಂಗಳೂರು-ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ, ಈ ಸೇತುವೆ ನಿರ್ಮಾಣದಿಂದ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗುವುದಲ್ಲದೆ ಸರಕು ಸಾಗಣೆ ವಾಹನಗಳು ವರ್ತುಲ ರಸ್ತೆ ಮೂಲಕ ಹಾದು ಹೋಗಲು ಸಹಕರಿಯಾಗುತ್ತದೆ ಎಂದರು.

ರಿಂಗ್ ರೋಡ್‌ಗೆ ನಕ್ಷೆ: ಅಂತರ ಜಿಲ್ಲೆಗಳ ಸಂಪರ್ಕಕ್ಕೆ ಸಹಕಾರಿಯಾಗಲು ನಗರದಲ್ಲಿ ರಿಂಗ್‌ರೋಡ್ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಲಾಗಿದೆ, ಇದರಿಂದ ತುಮಕೂರು, ಚಿಕ್ಕಬಳ್ಳಾಪುರ ಸೇರಿ ನೆರೆಯ ಅಂಧ್ರದ ಜಿಲ್ಲೆಗಳಿಗೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್ ರೆಡ್ಡಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net