ರೈಲ್ವೆ ಪಿಂಚಣಿ ಅದಾಲತ್‌ನಲ್ಲಿ 9 ಪ್ರಕರಣ ವಿಲೇವಾರಿ

mysore
Published on

ಮೈಸೂರು: ನಗರದಲ್ಲಿ ಸೋಮವಾರ ನಡೆದ ರೈಲ್ವೆ ಪಿಂಚಣಿ ಅದಾಲತ್‌ನಲ್ಲಿ 9 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು.

ನೈರುತ್ಯ ರೈಲ್ವೆ ವಿಭಾಗದಿಂದ ನಗರದ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಪಿಂಚಣಿ ಅದಾಲತ್‌ನಲ್ಲಿ 30 ಪಿಂಚಣಿದಾರರು ಭಾಗವಹಿಸಿದ್ದರು.

ಅದಾಲತ್‌ಗೆ ಸಂಬಂಧಿಸಿದಂತೆ ಪಿಂಚಣಿದಾರರು 17 ಪ್ರಕರಣ ಪ್ರತಿನಿಧಿಸಿದರು. ಇದರಲ್ಲಿ 9 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಇತರ ಪ್ರಕರಣಗಳು ಪರಿಶೀಲನೆಯಲ್ಲಿದ್ದು, ಅವುಗಳನ್ನು ತ್ವರಿತಗತಿಯಲ್ಲಿ ಪರಿಹಾರ ಮಾಡಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಪಿಂಚಣಿದಾರರ ಸಂದೇಹ, ಸಮಸ್ಯೆಗಳನ್ನು ಬಗೆಹರಿಸಿದರು. ಉಳಿದ ಪ್ರಕರಣಗಳನ್ನು ನಂತರ ಆದ್ಯತೆಯ ಮೇಲೆ ಪರಿಹಾರ ಮಾಡುವುದು ಎಂದು ಪಿಂಚಣಿದಾರರಿಗೆ ಮನವರಿಕೆ ಮಾಡಲಾಯಿತು.

ರೈಲ್ವೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮೈಸೂರು ಸಂಘದ ಪಾರ್ಥಸಾರಥಿ ಮಾತನಾಡಿ, ಮೈಸೂರು ವಿಭಾಗವು ಪಿಂಚಣಿದಾರರ ಕುಂದುಕೊರತೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಿ ಆದಷ್ಟು ಬೇಗ ಕುಂದುಕೊರತೆ ಪರಿಹರಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಕಾರ್ಮಿಕ ಅಧಿಕಾರಿ ವಿಷ್ಣು ಗೌಡ, ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕ ಹರ್ಷವರ್ಧನ ಅವರು ಪಿಂಚಣಿದಾರರ ಕುಂದುಕೊರತೆ ನಿವಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net