

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಜಾರಿಗೊಂಡಿರುವ ಪ್ರೀಪೇಯ್್ಡ ಆಟೋ ಸೌಲಭ್ಯದ ಮೊದಲ ದಿನವೇ ಕೆಲ ಆಟೋ ಚಾಲಕರು ಪ್ರಯಾಣಿಕರನ್ನು ಪುಸಲಾಯಿಸಿ, ಹೆಚ್ಚಿನ ದರ ವಸೂಲಿ ಮಾಡಿದ್ದು, ಸಮವಸ್ತ್ರ ಇಲ್ಲದೆ ಆಟೋ ನಡೆಸಿದಂತಹ ಹಲವಾರು ಸನ್ನಿವೇಶಗಳು ಕಂಡುಬಂದವು.
ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರೀಪೇಯ್್ಡ ಆಟೋ/ಟ್ಯಾಕ್ಸಿ ಸೌಲಭ್ಯ ಶುಕ್ರವಾರ ಉದ್ಘಾಟನೆಗೊಂಡಿದೆ. ಈ ಸೌಲಭ್ಯದ ಕುರಿತು ‘ವಿಜಯವಾಣಿ’ ಶನಿವಾರ ಬೆಳಗ್ಗೆ ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಹಲವಾರು ಅವ್ಯವಸ್ಥೆಗಳು ಗೋಚರಿಸಿದವು.
ಈಗಾಗಲೇ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಪ್ರೀಪೇಯ್್ಡ ಆಟೋ ಸೌಲಭ್ಯವನ್ನು ನೈಋತ್ಯ ರೈಲ್ವೆ ವಲಯ ಪ್ರೀ ಪೇಯ್್ಡ ಆಟೋ/ಟ್ಯಾಕ್ಸಿ ಸರ್ವಿಸ್ನ್ನು ಹುಬ್ಬಳ್ಳಿಯಲ್ಲಿಯೂ ಪ್ರಾರಂಭಿಸಿದೆ.
ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಆಟೋಗಳ ಚಾಲಕರು ಕಡ್ಡಾಯವಾಗಿ ಈ ಸರ್ವಿಸ್ನಡಿ ಎಲ್ಲ ದಾಖಲೆಗಳನ್ನು ನೀಡಿ, ಹೆಸರು ನೋಂದಾಯಿಸಿಕೊಳ್ಳಬೇಕು. ಸಮವಸ್ತ್ರ ಧರಿಸಬೇಕು ಹಾಗೂ ಸರ್ವಿಸ್ನವರು ನಿಗದಿಪಡಿಸುವ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು. ಜತೆಗೆ ಚಾಲನೆ ಪರವಾನಗಿ ಕಡ್ಡಾಯ. ಇದರಿಂದಾಗಿ ಮನಬಂದಂತೆ ಆಟೋ ಬಾಡಿಗೆ ವಸೂಲಿ ಮಾಡುವ, ಪ್ರಯಾಣಿಕರನ್ನು ಲೂಟಿ ಮಾಡುವಂತಹ ಕೃತ್ಯಗಳಿಗೆ ಕಡಿವಾಣ ಬಿದ್ದಂತಾಗಿದೆ.
ಆದರೆ, ಶನಿವಾರ ಬೆಳಗ್ಗೆ ಬಹುತೇಕ ಆಟೋ ಚಾಲಕರು ಸಮವಸ್ತ್ರ ಧರಿಸಿರಲಿಲ್ಲ. ಎಲ್ಲರ ಕಡೆ ಸರ್ವಿಸ್ನಿಂದ ನೀಡುವ ಬ್ಯಾಚ್ ಇರಲಿಲ್ಲ. ಬಹುತೇಕ ಆಟೋಗಳು ಸರದಿಯಲ್ಲಿ ನಿಂತು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರೂ ಅವರಲ್ಲಿಯೇ ತಾ ಮುಂದು, ನಾ ಮುಂದು ಎಂಬ ಪೈಪೋಟೆ ನಡೆದಿತ್ತು. ಈ ಸರ್ವಿಸ್ ಕೌಂಟರ್ ಪಕ್ಕದಲ್ಲಿಯೇ ಕೆಲ ಆಟೋ ಚಾಲಕರು ಪ್ರಯಾಣಿಕರನ್ನು ಕೌಂಟರ್ನತ್ತ ಹೋಗಲು ಬಿಡದೇ ತಮ್ಮ ಆಟೋಗಳಲ್ಲಿ ಕೂರಿಸಿಕೊಳ್ಳುತ್ತಿರುವುದು ಕಂಡುಬಂದಿತು.
ಈ ಎಲ್ಲ ಘಟನೆಗಳನ್ನು ನಿಯಂತ್ರಿಸುವ ಮೂಲಕ ಕಡ್ಡಾಯವಾಗಿ ಕೌಂಟರ್ನಲ್ಲಿಯೇ ಆಟೋ ಬಾಡಿಗೆ ನೀಡಿ ರಸೀದಿ ಪಡೆಯುವುದಕ್ಕೆ, ಆಟೋ ಚಾಲಕರು ಸರದಿಯಲ್ಲಿ ನಿಲ್ಲುವಂತೆ, ಪ್ರಯಾಣಿಕರನ್ನು ಯಾಮಾರಿಸಿ ಅವರಿಂದ ಹೆಚ್ಚಿನ ದರ ವಸೂಲಿ ಮಾಡುವ ಆಟೋ ಚಾಲಕರನ್ನು ದೂರ ಓಡಿಸುವುದಕ್ಕೆ ಇರಬೇಕಾದ ಪೊಲೀಸ್ ಸಿಬ್ಬಂದಿ ಕಾಣಲೇ ಇಲ್ಲ.
ಪೊಲೀಸರ ಗೈರು ಹಾಜರಿಯಿಂದಾಗಿ ಪ್ರಯಾಣಿಕರ ಸುರಕ್ಷತೆ ಹಾಗೂ ಲೂಟಿ ತಡೆಯುವುದಕ್ಕಾಗಿ ಜಾರಿಗೆ ತಂದ ಪ್ರೀಪೇಯ್್ಡ ಆಟೋ ಸೌಲಭ್ಯ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
* ಹುಬ್ಬಳ್ಳಿ ರೈಲ್ವೆ ನಿಲ್ದಾಣದ 2ನೇ ಗೇಟ್ ಹಾಗೂ ಅಂಡರ್ಗ್ರೌಂಡ್ ಬಳಿ ಇನ್ನೂ 2 ತಿಂಗಳಲ್ಲಿ ತಲಾ ಒಂದು ಪ್ರೀಪೇಯ್್ಡ ಆಟೋ/ಟ್ಯಾಕ್ಸಿ ಸರ್ವಿಸ್ ಕೌಂಟರ್ ಪ್ರಾರಂಭಗೊಳ್ಳಲಿವೆ.
* ಇನ್ನೂ 2-3 ತಿಂಗಳಲ್ಲಿ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿಯೂ ಪ್ರೀಪೇಯ್್ಡ ಆಟೋ/ಟ್ಯಾಕ್ಸಿ ಸರ್ವಿಸ್ ಕೌಂಟರ್ ತಲೆ ಎತ್ತಲಿದೆ.
* 1.6 ಕಿಮೀಗೆ 28 ರೂ. ದರ ನಿಗದಿ ಪಡಿಸಲಾಗಿದ್ದು, ನಂತರದ ಪ್ರತಿ ಕಿಮೀಗೆ 15 ರೂ. ದರ ನೀಡಬೇಕು. ಇದರೊಂದಿಗೆ ಸೇವಾ ಶುಲ್ಕವಾಗಿ ಹೆಚ್ಚುವರಿ 2 ರೂ. ಪಡೆಯಲಾಗುತ್ತದೆ.
* ಒಂದು ಆಟೋದಲ್ಲಿ ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶ. 4 ಜನರಿದ್ದರೆ 2 ಆಟೋದಲ್ಲಿ ಪ್ರಯಾಣಿಸಬಹುದು.
* ಇಲ್ಲಿ ಪ್ರಯಾಣಿಕರ ಸಂಖ್ಯೆ ಬದಲು ಕ್ರಮಿಸುವ ದೂರದ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ. ರೈಲ್ವೆ ನಿಲ್ದಾಣದಿಂದ ಚಿಟಗುಪ್ಪಿ ಆಸ್ಪತ್ರೆ, ಮಹಾನಗರ ಪಾಲಿಕೆ, ಶಿವಕೃಪಾ ಹೋಟೆಲ್, ಅಜಂತಾ ಹೋಟೆಲ್, ಮೀನಾ ಕಲಘಟಗಿ ಆಸ್ಪತ್ರೆಗೆ ಹೋಗಬೇಕಾದರೆ 30 ರೂ. ನೀಡಿದರೆ ಸಾಕು. ಪ್ರಯಾಣಿಕರು ಮೂವರಿದ್ದರೂ 30 ರೂ. ಮಾತ್ರ ಪಡೆಯಲಾಗುತ್ತದೆ.
* ಸರ್ವಿಸ್ ಕೌಂಟರ್ ಸುತ್ತ ಹಾಗೂ ಒಳಗೆ 7 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
* ದಿನದ 24 ತಾಸು ಒಬ್ಬರು ಎಎಸ್ಐ ಹಾಗೂ ಇಬ್ಬರು ಪೇದೆಗಳನ್ನು ನಿಯೋಜಿಸುವಂತೆ ಪೊಲೀಸ್ ಇಲಾಖೆಗೆ ಪ್ರೀಪೇಯ್್ಡ ಆಟೋ/ಟ್ಯಾಕ್ಸಿ ಸರ್ವಿಸ್ನಿಂದ ಮನವಿ ಸಲ್ಲಿಸಲಾಗಿದೆ.
ಆಟೋ ನಿಲ್ದಾಣಕ್ಕಿಂತ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದಿದ್ದಾರೆ. ಇದುವರೆಗೆ 150ಕ್ಕೂ ಹೆಚ್ಚು ಆಟೋ ಚಾಲಕರು ಸದಸ್ಯರಾಗಿದ್ದಾರೆ. ಆರ್ಟಿಒ ಅಧಿಕಾರಿಗಳನ್ನು ಕರೆಯಿಸಿ ಜಾಗೃತಿ ಮೂಡಿಸಲಾಗುವುದು. ಆಟೋ ಚಾಲಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬಯಸಿದರೆ 25 ಸಾವಿರ ರೂ.ಗಳವರೆಗೆ ಆರ್ಥಿಕ ಸಹಾಯ ನೀಡಲಾಗುವುದು.- ಬಿ. ಚಂದ್ರಶೇಖರ, ಪ್ರೀ ಪೇಯ್್ಡ ಆಟೋ/ಟ್ಯಾಕ್ಸಿ ಸರ್ವಿಸ್ ಅಧ್ಯಕ್ಷ