ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಪ್ರತಿಭಟನೆ ವಾಪಸ್​

28-55
ಕುಡಚಿ&ಬಾಗಲಕೋಟೆ ರೆಲು ನಿರ್ಮಾಣ ಕಾಮಗಾರಿ ಚಾಲನೆಗೆ ಒತ್ತಾಯಿಸಿ ರಾಜ್ಯ ರೆಲ್ವೆ ಅಭಿವದ್ಧಿ- ಹೋರಾಟ ಸಮಿತಿ ಅಧ್ಯ ಕುತುಬುದ್ದೀನ್​ ಖಾಜಿ ಅವರೊಂದಿಗೆ ಹುಬ್ಬಳಿ ರೆಲ್ವೆ ಇಲಾಖೆ ಸಹಾಯಕ ಅಭಿಯಂತ ರಾಜು ನಾಯಕ್​ ಚರ್ಚಿಸಿದರು. ಭುಜಬಲಿ ಕೆಂಗಾಲೆ, ಮೆಬೂಬ್​ ಶೇಖ್​, ಅಮಿನ ಜಾತಗಾರ, ಸುಭಾಷ ಶಿರಬೂರ ಇತರರು ಇದ್ದರು.
Published on

ಕುಡಚಿ: ಪಟ್ಟಣದ ರೆಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕುಡಚಿ&ಬಾಗಲಕೋಟೆ ರೆಲು ಮಾರ್ಗ ಕಾಮಗಾರಿಗೆ ಚಾಲನೆ ನೀಡುವ ಭರವಸೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯ ರೆಲ್ವೆ ಅಭಿವದ್ಧಿ- ಹೋರಾಟ ಸಮಿತಿ ಮಂಗಳವಾರ ವಾಪಸ್​ ಪಡೆಯಿತು. ರಾಜ್ಯ ರೆಲ್ವೆ ಅಭಿವದ್ಧಿ- ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್​ ಖಾಜಿ ಮಾತನಾಡಿ, ಪ್ರಸ್ತುತ ರೈಲು ಕಾಮಗಾರಿ ಚಾಲನೆಗೆ ಆಗ್ರಹಿಸಿ ಬಾಗಲಕೋಟೆಯಿಂದ ಡಿ.17ರಿಂದ ಕುಡಚಿ ಪಟ್ಟಣದವರೆಗೆ ಅರೆಬೆತ್ತಲೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಈ ಕಾಮಗಾರಿಗೆ ಚಾಲನೆ ಸಿಕ್ಕರೆ ಈ ಭಾಗದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ. ನಮ್ಮ ಕೂಗು ಸರ್ಕಾರಕ್ಕೆ ಕೇಳಿಸಬೇಕಿದೆ. ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶ್ರೀ ಕಾಮಗಾರಿ ಕೈಗೊಳ್ಳಬೇಕು ಎಂದರು. ಹೋರಾಟಗಾರರಾದ ಭುಜಬಲಿ ಕೆಂಗಾಲೆ, ಮೆಬೂಬ್​ ಶೇಖ್​, ಅಮಿನ ಜಾತಗಾರ, ಸುಭಾಷ ಶಿರಬೂರ, ಾತಿಮಾ ಶೇಖ್​, ಸದ್ದಾಂ ತೋಪಿಕ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net