

ಮೈಸೂರು: ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗ, ರೈಲುಗಳಲ್ಲಿ ವಿಶೇಷ ಕಾಳಜಿ ವಹಿಸಿದ್ದು, ‘ಮೇರಿ ಸಹೇಲಿ’ (ನನ್ನ ಗೆಳತಿ) ಎಂಬ ಹೊಸ ಕಾರ್ಯಕ್ರಮ ಪ್ರಾರಂಭಿಸುವ ಮೂಲಕ ಮಹಿಳೆಯರ ಪಾಲಿಗೆ ರೈಲು ಪ್ರಯಾಣ ಸುರಕ್ಷಿತ ಎಂಬ ಸಂದೇಶ ಸಾರಿದೆ.
ದೀಪಾವಳಿ ಸೇರಿದಂತೆ ಮುಂದಿನ ದಿನಗಳಲ್ಲಿ ಬರುವ ಹಬ್ಬಗಳ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳಲ್ಲಿ ಪ್ರಯಾಣಿಸಲಿದ್ದಾರೆ. ಆದ್ದರಿಂದ ಅವರ ರಕ್ಷಣೆಗೆ ರೈಲ್ವೆ ಪೊಲೀಸ್ ಪಡೆಯು (ಆರ್‌ಪಿಎಫ್) ಆರಂಭಿಕ ಸ್ಥಳದಿಂದ ಅಂತ್ಯದವರೆಗೆ ಸುರಕ್ಷತೆ ಹಾಗೂ ಭದ್ರತೆ ನಿಟ್ಟಿನಲ್ಲಿ ಕಣ್ಗಾವಲು ವಹಿಸಲಿದೆ.