ರೈಲು ಸಂಚಾರದಲ್ಲಿ ಬದಲಾವಣೆ

rail
Published on

ಹುಬ್ಬಳ್ಳಿ : ಚಿಕ್ಕಜಾಜೂರ- ಹುಬ್ಬಳ್ಳಿ ಭಾಗದ ದ್ವಿಪಥ ಮಾರ್ಗದ ಸಂಶಿ ದ್ವಿತೀಯ ಹಂತದ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಮಾ. 4ರವರೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ - ಅರಸಿಕೆರೆ ಡೈಲಿ ಎಕ್ಸ್​ಪ್ರೆಸ್, 5ರವರೆಗೆ ಅರಸಿಕೆರೆ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್, 4ರವರೆಎ ಎಸ್​ಎಸ್​ಎಸ್ ಹುಬ್ಬಳ್ಳಿ - ಚಿತ್ರದುರ್ಗ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಮಾ. 4ರವರೆಗೆ ಕೆಎಸ್​ಆರ್ ಬೆಂಗಳೂರು - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಜನ ಶತಾಬ್ದಿ ಎಕ್ಸ್​ಪ್ರೆಸ್ ರೈಲು ಸಂಚಾರ ಹರಿಹರ- ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯೆ ರದ್ದಾಗಲಿದ್ದು, ಈ ರೈಲು ಹರಿಹರವರೆಗೆ ಮಾತ್ರ ಸಂಚರಿಸಲಿದೆ. ಎಸ್​ಎಸ್​ಎಸ್ ಹುಬ್ಬಳ್ಳಿ- ಕೆಎಸ್​ಆರ್ ಬೆಂಗಳೂರು ಡೈಲಿ ಜನ ಶತಾಬ್ದಿ ಎಕ್ಸ್​ಪ್ರೆಸ್ ಸಂಚಾರ ಎಸ್​ಎಸ್​ಎಸ್ ಹುಬ್ಬಳ್ಳಿ ಮತ್ತು ಹರಿಹರ ಮಧ್ಯೆ ರದ್ದಾಗಿದ್ದು, ಈ ರೈಲು ಹರಿಹರದಿಂದ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net