ರೈಲು ಸಂಚಾರ ರದ್ದು

rail
Published on

ಹುಬ್ಬಳ್ಳಿ: ಗುಳೇದಗುಡ್ಡ ರೋಡ-ಬದಾಮಿ ಮಧ್ಯೆ ನಡೆಯುತ್ತಿರುವ ಕಾಮಗಾರಿಯಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಫೆ. 7 ರಿಂದ 15ರವರೆಗೆ ವಿಜಯಪುರ- ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೇಷಲ್, 8 ರಿಂದ 15ರವರೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ - ವಿಜಯಪುರ ಡೈಲಿ ಪ್ಯಾಸೆಂಜರ್ ಸ್ಪೇಷಲ್, 7 ರಿಂದ 15ರವರೆಗೆ ಸೊಲ್ಲಾಪುರ-ಎಸ್​ಎಸ್​ಎಸ್ ಹುಬ್ಬಳ್ಳಿ- ಸೊಲ್ಲಾಪುರ ಡೈಲಿ ಪ್ಯಾಸೆಂಜರ್ ಸ್ಪೇಷಲ್, ಸೊಲ್ಲಾಪುರ- ಗದಗ ಡೈಲಿ ಎಕ್ಸ್​ಪ್ರೆಸ್, 8 ರಿಂದ 16ರವರೆಗೆ ಗದಗ - ಸೊಲ್ಲಾಪುರ ಡೈಲಿ ಎಕ್ಸ್​ಪ್ರೆಸ್, 7 ರಿಂದ 15ರವರೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ - ವಿಜಯಪುರ ಡೈಲಿ ಇಂಟರ್​ಸಿಟಿ ಎಕ್ಸ್​ಪ್ರೆಸ್, 8 ರಿಂದ 16ರವರೆಗೆ ವಿಜಯಪುರ - ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​ಪ್ರೆಸ್ ಸ್ಪೇಷಲ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net