ಹುಬ್ಬಳ್ಳಿ : ಹೊಳೆ ಆಲೂರು- ಬದಾಮಿ ಮಧ್ಯೆ ನಡೆದಿರುವ ದ್ವಿಪಥಮಾರ್ಗ ನಿರ್ವಣದ ಹಿನ್ನೆಲೆಯಲ್ಲಿ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಡಿ. 1ರಂದು ವಿಜಯಪುರ - ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು, ಡಿ. 3ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ - ವಿಜಯಪುರ ಪ್ಯಾಸೆಂಜರ್ ಸ್ಪೇಷಲ್, ವಿಜಯಪುರ- ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಷಲ್, ಸೊಲ್ಲಾಪುರ -ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಷಲ್, 2ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ್ ಸ್ಪೇಷಲ್, ಡಿ. 1 ರಿಂದ 3ರವರೆಗೆ ಸೊಲ್ಲಾಪುರ - ಧಾರವಾಡ ಸ್ಪೇಷಲ್, 2ರವರೆಗೆ ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ್ ಸ್ಪೇಷಲ್, ಎಸ್ಎಸ್ಎಸ್ ಹುಬ್ಬಳ್ಳಿ - ವಿಜಯಪುರ ಪ್ಯಾಸೆಂಜರ್ ಸ್ಪೇಷಲ್, ಡಿ. 1 ರಿಂದ 3ರವರೆಗೆ ವಿಜಯಪುರ - ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಷಲ್, ಡಿ. 2ರವರೆಗೆ ಸೊಲ್ಲಾಪುರ - ಗದಗ ಎಕ್ಸ್ಪ್ರೆಸ್, ಡಿ. 1 ರಿಂದ 3ರವರೆಗೆ ಗದಗ - ಸೊಲ್ಲಾಪುರ ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.