ರೈಲು ಮಾರ್ಗ ಕಾಮಗಾರಿ ಪೂರ್ಣಗೊಳಿಸಿ

5..3
ಕರಾಡ- ನಿಪ್ಪಾಣಿ-ಬೆಳಗಾವಿ ರೆಲು ಮಾರ್ಗ ಕಾಮಗಾರಿ ಆರಂಭಿಸುವಂತೆ ನವದೆಹಲಿಯಲ್ಲಿ ಕೇಂದ್ರ ರೆಲ್ವೆ ಸಚಿವ ಅಶ್ವಿನಿ ವೆಷ್ಣವಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಮನವಿ ಸಲ್ಲಿಸಿದರು. ಡಾ.ಅಜಿತ ಘೋರ್ಪಡೆ, ಸಂಜಯ ಪಾಟೀಲ ಇತರರು ಇದ್ದರು.
Published on

ಚಿಕ್ಕೋಡಿ: ಬಹುದಿನಗಳಿಂದ ಬಾಕಿ ಉಳಿದಿರುವ ಕರಾಡ- ನಿಪ್ಪಾಣಿ-ಬೆಳಗಾವಿ ರೆಲು ಮಾರ್ಗದ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸುವಂತೆ ನವದೆಹಲಿಯಲ್ಲಿ ಕೇಂದ್ರ ರೆಲ್ವೆ ಸಚಿವ ಅಶ್ವಿನಿ ವೆಷ್ಣವ ಅವರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಬುಧವಾರ ಮನವಿ ಸಲ್ಲಿಸಿದರು.

ರೈಲು ಮಾರ್ಗ ಪೂರ್ಣಗೊಂಡರೆ ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದ ಸಾವಿರಾರು ಜನರಿಗೆ ಅನುಕೂಲ ವಾಗಲಿದೆ. ಇದರೊಂದಿಗೆ ಕರಾಡ -ನಿಪ್ಪಾಣಿ- ಬೆಳಗಾವಿ, ಶೇಡಬಾಳ -ಅಥಣಿ -ವಿಜಯಪುರ, ಬೆಳಗಾವಿ -ಕೊಲ್ಲಾಪುರ, ಬೆಳಗಾವಿ -ಕಿತ್ತೂರು -ಧಾರವಾಡ, ಹಾಸನ- ಮಂಗಳೂರು ಮಾರ್ಗಗಳನ್ನು ಆರಂಭಿಸುವಂತೆ ಮನವಿ ಮಾಡಿದರು.

ಹುಬ್ಬಳ್ಳಿ -ದಾದರ ಎಕ್ಸ್‌ಪ್ರೆಸ್ (ಉಗಾರನಲ್ಲಿ ರೆಲ್ವೆ ನಿಲ್ದಾಣದಲ್ಲಿ ನಿಲುಗಡೆ), ಶರಾವತಿ ಎಕ್ಸ್‌ಪ್ರೆಸ್ ಮತ್ತು ಪುದುಚೇರಿ ಎಕ್ಸ್‌ಪ್ರೆಸ್ (ಶೆಡಬಾಳ ರೆಲು ನಿಲ್ದಾಣನದಲ್ಲಿ ನಿಲುಗಡೆ), ಅಜ್ಮೀರ್ ಎಕ್ಸ್‌ಪ್ರೆಸ್ ಮತ್ತು ಹರಿಪ್ರಿಯಾ ಎಕ್ಸ್‌ಪ್ರೆಸ್ (ಕುಡಚಿ ಮತ್ತು ರಾಯಬಾಗ ಚಿಕೋಡಿ ರೆಲ್ವೆ ನಿಲ್ದಾಣಗಳಲ್ಲಿ ನಿಲುಗಡೆ) ಕುರಿತು ಮನವಿ ಸಲ್ಲಿಸಿದರು.

ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಶೀಘ್ರದಲ್ಲಿ ಅಗತ್ಯ ಕ್ರಮ ಕೆಗೊಳ್ಳುವುದಾಗಿ ಭರವಸೆ ನೀಡಿದರು. ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷ ಡಾ.ಅಜಿತ ಘೋರ್ಪಡೆ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net