ರೈಲು ನಿಲುಗಡೆಗೆ ಒತ್ತಾಯ

Manavi
Published on

ಚಿತ್ರದುರ್ಗ: ರೈಲುಗಳನ್ನು ನಿಲ್ಲಿಸುವ ಮೂಲಕ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಹುಬ್ಬಳ್ಳಿಯ ಸಂಜೀವ್ ಕಿಶೋರ್ ಅವರಿಗೆ ನಾಗರಿಕರು ಭಾನುವಾರ ಮನವಿ ಸಲ್ಲಿಸಿದರು.

ಹೊಳಲ್ಕೆರೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ವ್ಯವಸ್ಥಾಪಕರ ಬಳಿ ಸಾರ್ವಜನಿಕರು ಉಂಟಾಗುತ್ತಿರುವ ತೊಂದರೆ ಬಗೆಹರಿಸುವಂತೆ ಕೋರಿದರು.

ಕುನುಗಲಿ ಗ್ರಾಮದ ವೈದ್ಯ ಡಾ.ಶಿವಣ್ಣ, ಮಹಾಲಿಂಗಪ್ಪ, ಗ್ರಾಪಂ ಮಾಜಿ ಸದಸ್ಯರಾದ ರಾಮಚಂದ್ರಪ್ಪ, ಹರೇಹಳ್ಳಿ ಹಟ್ಟಿಯ ಜಯಣ್ಣ, ಅಗ್ರಹಾರದ ಕಲ್ಲೇಶ್, ಕೆಂಗುಂಟೆ ನಾಗರಾಜ್, ಬಸವರಾಜ್, ರಮೇಶ್, ನಟರಾಜ್, ಗಿರೀಶ್, ಈರಪ್ಪ, ತಿಮ್ಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net