ರೈಲಿನಲ್ಲಿ 1.6 ಕೆ.ಜಿ. ಗಾಂಜಾ ವಶ

mysore
Published on

ಮೈಸೂರು: ರೈಲಿನಲ್ಲಿ ಸಾಗಿಸುತ್ತಿದ್ದ 1.6 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ದರ್ಬಾಂಗ್‌ನಿಂದ ಮೈಸೂರಿಗೆ ಬಂದ ಸೂಪರ್ ಫಾಸ್ಟ್ ರೈಲಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆದಾರದಲ್ಲಿ ಕಾರ್ಯಪ್ರವೃತ್ತರಾದ ಅಬಕಾರಿ ಇಲಾಖೆ ಅಧಿಕಾರಿಗಳು, ರೈಲ್ವೆ ಭದ್ರತಾ ಪಡೆಯ ಅಧಿಕಾರಿಗಳು, ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೋಗಿಗಳನ್ನು ತಪಾಸಣೆ ನಡೆಸಿದ್ದು,

ಎಸಿ ಕೋಚ್‌ನಲ್ಲಿ ವಾರಸುದಾರರು ಇಲ್ಲದ ನೀಲಿಬಣ್ಣದ ಸೂಟ್‌ಕೇಸ್ ಪತ್ತೆಯಾಗಿದೆ.

ಅದರಲ್ಲಿ ಗಾಂಜಾ ಸಿಕ್ಕಿದೆ. ಎನ್‌ಡಿಎಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ.ನಿರೀಕ್ಷಕಿ ಪೂಜಾ ರಾಮು, ಉಪನಿರೀಕ್ಷಕ ರವಿಕುಮಾರ್, ಸಿಬ್ಬಂದಿ ಎನ್.ಅಜಯ್, ಸಿ.ಮಂಜುನಾಥ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net