ರೈಲಿಗೆ ಸಿಲುಕಿ ಅಪರಿಚಿತ ಆತ್ಮಹತ್ಯೆ

Published on

ಚಾಮರಾಜನಗರ: ನಗರದ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಸುಮಾರು 60-65ವರ್ಷವಾಗಿದ್ದು, 5.2 ಅಡಿ ಎತ್ತರ ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಗಡ್ಡ ಮೀಸೆ ಇರುತ್ತದೆ. ಬಲಗೈ ಮೇಲೆ ಗಂಗಾಬಾಯಿ, ಲಕ್ಷ್ಮೀ, ಗದಗ ಬೆಟಗೇರಿ ಎಂಬ ಹಚ್ಚೆ ಗುರುತು ಇದೆ. ಎಡಗೈ ಮೇಲೆ ಗಂಗಾ, ರಾಜ, ಲಕ್ಷ್ಮೀ ಎಂದು ಕನ್ನಡದಲ್ಲಿ ಬರೆದಿರುವ ಹಚ್ಚೆ ಗುರುತು ಇದ್ದು, ಪಿಂಕ್ ಕಲರ್ ರೆಡಿಮೇಡ್ ತುಂಬು ತೋಳಿನ ಶರ್ಟ್, ಮೆರೂನ್ ಕಲರ್ ಟಿ-ಶರ್ಟ್, ಹಸಿರು ಬಣ್ಣದ ಸೇಫ್ಟಿ ಜಾಕೆಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net