ರೈತಸಂಘ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

12-pnp 2
Published on

ಪಾಂಡವಪುರ: ತಾಲೂಕಿನ ಚಾಗಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ರೈತಸಂಘ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.

ಈ ಹಿಂದಿನ ಅಧ್ಯಕ್ಷ ಲಿಂಗಪ್ಪ ಅಧಿಕಾರ ಹಂಚಿಕೆ ಒಡಂಬಡಿಕೆಗೆ ಬದ್ಧರಾಗಿ ಅಧ್ಯಕ್ಷಗಾದಿಗೆ ರಾಜೀನಾಮೆ ಸಲ್ಲಿಸದ ಹಿನ್ನೆಲೆಯಲ್ಲಿ ಬೇಸತ್ತ ಇತರ ನಿರ್ದೇಶಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಇದರಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಂಘದ ಆಡಳಿತ ಮಂಡಳಿಯನ್ನು ವರ್ಷದ ಹಿಂದೆ ಸೂಪರ್‌ಸೀಡ್ ಮಾಡಿದ್ದರು. ಹೀಗಾಗಿ ಹೊಸ ಆಡಳಿತ ಮಂಡಳಿ ಆಯ್ಕೆಗಾಗಿ ಜೂ.11 (ಭಾನುವಾರ)ರಂದು ಚುನಾವಣೆ ನಿಗದಿಯಾಗಿತ್ತು. ಒಟ್ಟು 11 ಸ್ಥಾನಗಳ ಪೈಕಿ ರೈತಸಂಘ ಬೆಂಬಲಿತರು 9 ಹಾಗೂ ಜೆಡಿಎಸ್ ಬೆಂಬಲಿತ ಇಬ್ಬರು ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎಂ.ಎಸ್. ಪಾರ್ವತಮ್ಮ ಕರ್ತವ್ಯ ನಿರ್ವಹಿಸಿದರು.

ಚುನಾಯಿತರ ವಿವರ: ರೈತಸಂಘ ಬೆಂಬಲಿತರಾದ ನಂಜಪ್ಪ, ಜಯಣ್ಣ, ಸಿ.ಬಿ.ಬಸವಣ್ಣ, ಸಿ.ಕೆ.ಇಂದ್ರಪ್ಪ, ಎಂ.ಬಿ.ಮಾದಪ್ಪ, ವಿಜಯ, ಶಂಭುಲಿಂಗಪ್ಪ, ಪಾಪಶೆಟ್ಟಿ, ಎಂ.ಬಿ.ಮಲ್ಲಿಕಾರ್ಜುನ ಹಾಗೂ ಜೆಡಿಎಸ್ ಬೆಂಬಲಿತರಾದ ಮೀನಾಕ್ಷಿ, ಮಲ್ಲಿಕಾರ್ಜುನ ಚುನಾಯಿತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net