ರೈತರೊಂದಿಗೊಂದು ದಿನ 20ರಂದು

B C Patil
Published on

ಬೀದರ್: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ರೈತರೊಂದಿಗೊಂದು ದಿನ' ಕಾರ್ಯಕ್ರಮದ ನಿಮಿತ್ತ ಇದೇ 20ರಂದು ಔರಾದ್ ತಾಲೂಕಿನ ಠಾಣಾಕುಶನೂರಗೆ ಆಗಮಿಸುತ್ತಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ.

ಸಚಿವರು ಅಂದು ಬೆಳಗ್ಗೆ ಔರಾದ್ ತಾಲೂಕಿನ ಸಂಗಮ, ಖೇಡ್ ಹಾಗೂ ಹಾಲಹಳ್ಳಿ ಗ್ರಾಮಗಳ ಕೃಷಿ ಭೂಮಿಗಳಿಗೆ ಭೇಟಿ ನೀಡಿ, ರೈತರೊಂದಿಗೆ ಕಬ್ಬು, ತರಕಾರಿ ವಿವಿಧ ಬೆಳೆಗಳ ನಾಟಿ ಮಾಡಲಿದ್ದಾರೆ. ಬೋದು ಹಾಕುವುದು ಸೇರಿದಂತೆ ನಾನಾ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವರು. ಬಳಿಕ ಠಾಣಾಕುಶನೂರ ಗ್ರಾಮದಲ್ಲಿ ಏರ್ಪಡಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗರಿಷ್ಠ ಇಳುವರಿ ಪಡೆದ ರೈತರಿಗೆ ಹಾಗೂ ಕೃಷಿ ಪ್ರಶಸ್ತಿ ಪಡೆದಿರುವ ಜಿಲ್ಲೆಯ ರೈತ ದಂಪತಿಗಳಿಗೆ ಸನ್ಮಾನಿಸುವರು. ರೈತರೊಂದಿಗೆ ಸಂವಾದ ನಡೆಸಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಸಹ ಆಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಏಳ್ಗೆ ಮತ್ತು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಬಗ್ಗೆ ಕಾಳಜಿ ಹೊಂದಿರುವ ಕೃಷಿ ಸಚಿವರುರೈತರೊಂದಿಗೊಂದು ದಿನ' ವಿಶಿಷ್ಟ ಕಾರ್ಯಕ್ರಮದ ಮೂಲಕ ಅನ್ನದಾತರಿಗೆ ನೆರವಾಗಲು ಮುಂದಾಗಿದ್ದಾರೆ. ಅಂದು ದಿನವಿಡೀ ಕೃಷಿ ಸಚಿವರೊಂದಿಗೆ ನಾನೂ ಇರಲಿದ್ದು, ಜಿಲ್ಲೆ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ.

ಜಿಲ್ಲೆ ರೈತರಿಗೆ ಅನುಕೂಲವಾಗಲಿರುವ ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಕೃಷಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ಎಚ್ಚರಿಕೆ ವಹಿಸಬೇಕು.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net