ರೈತರೊಂದಿಗೆ ಸರಿಯಾಗಿ ನಡೆದುಕೊಳ್ಳಿ

0306Aland1
ಆಳಂದ ಹೊರ ವಲಯದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ಬಿ.ಆರ್.ಪಾಟೀಲ್ ಅವರು ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿದರು. ಶರಣಗೌಡ ಪಾಟೀಲ್, ರವಿಕಾಂತ ಪಾಟೀಲ್, ಸುರೇಂದ್ರ ಪಾಟೀಲ್ ಇತರರಿದ್ದರು.
Published on

ಆಳಂದ: ರೈತರು ಕೃಷಿ ಇಲಾಖೆಯಿಂದ ವಿತರಿಸುವ ಗುಣಮಟ್ಟದ ಬೀಜಗಳನ್ನು ರಿಯಾಯತಿ ದರದಲ್ಲಿ ಪಡೆದುಕೊಂಡು ಬಿತ್ತನೆ ಕಾರ್ಯ ಮಾಡಿ. ಅಲ್ಲದೆ ಅಧಿಕಾರಿಗಳು ರೈತರೊಂದಿಗೆ ಸರಿಯಾಗಿ ವರ್ತಿಸಿ ಎಂದು ಶಾಸಕ ಬಿ.ಆರ್.ಪಾಟೀಲ್ ತಾಕೀತು ಮಾಡಿದರು.

ಹೊರ ವಲಯದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬೀಜ ವಿತರಣೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಮೇ ತಿಂಗಳ ಕೊನೆಯಲ್ಲಿ ಅಧಿಕ ಮಳೆಯಾಗಿದ್ದು, ಇದ್ದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಇನ್ನೂ ಒಂದು ವಾರ ಬಿತ್ತನೆ ಮಾಡದಂತೆ ಕೃಷಿ ಪರಿಣಿತರು ಹೇಳಿದ್ದಾರೆ. ಆದರೆ ರೈತಾಪಿ ವರ್ಗ ಸರಿಯಾಗಿ ಯೋಚನೆ ಮಾಡಿ ಬಿತ್ತನೆ ಕಾರ್ಯ ಕೈಗೊಳ್ಳಲಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ, ಖಜೂರಿ, ನಿಂಬರ್ಗಾ, ಮಾದನಹಿಪ್ಪರಗಾ, ಆಳಂದ, ನರೋಣಾ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ೧.೨೨ ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಮೇ ೩೧ರ ವರೆಗೆ ೬೬ ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು, ಒಟ್ಟು ೨೧೭.೭ ಮಿಮೀ. ಮಳೆಯಾಗಿದೆ. ಜೂ.೧ರಿಂದ ಮಾನ್ಸೂನ್ ಮಳೆ ಅನ್ವಯವಾಗುತ್ತದೆ. ಹೆಸರು, ಉದ್ದು, ಸೋಯಾಬೀನ್, ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಇತ್ಯಾದಿಗಳನ್ನು ಸಹಾಯಧನ ಅಡಿಯಲ್ಲಿ ರೈತರಿಗೆ ವಿತರಣೆ ಮಾಡಲಾಗುವುದು. ಸದ್ಯ ಬೀಜ, ಗೊಬ್ಬರ ಕೊರತೆಯಿಲ್ಲ ಎಂದು ಹೇಳಿದರು.

ಅಧಿಕಾರಿಗಳಾದ ಸರೋಜಿನಿ ಎಸ್.ಟಿ., ಮಾಧವಿ ಸಾವಳಗಿ, ಬಿ.ಎಂ.ಬಿರಾದಾರ, ಸಂಜಯ ಸವದಿ, ರವಿಕಾಂತ ಪಾಟೀಲ್, ಸುರೇಂದ್ರ ಪಾಟೀಲ್, ಲಕ್ಷ್ಮಣ ಝಳಕಿ, ಹಣಮಂತರಾಯ ಬಿರಾದಾರ, ಯೋಗೇಶ ಸಕ್ಕರಗಾ, ಪ್ರಕಾಶ ಮುನ್ನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net