ರೈತರೇ ಕಬ್ಬು ರಕ್ಷಣೆಗೆ ಜೈವಿಕ ಕೀಟನಾಶಕ ಬಳಸಿ

10..4
ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಬುಧವಾರ ಕಬ್ಬು ಬೆಳೆಯಲ್ಲಿ ಸಮಗ್ರ ಕೀಟ, ರೋಗ ನಿರ್ವಹಣೆ ಕಾರ್ಯಾಗಾರ ಜರುಗಿತು. ಮಂಜುನಾಥ ಚೌರಡ್ಡಿ, ನಿಂಗನಗೌಡ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಬಾಳಗೌಡ ಹರಗೌಡನವರ, ಬಸವರಾಜ ಲೊಳಸುರೆ ಇತರರಿದ್ದರು.
Published on

ಬೆಳಗಾವಿ: ಪ್ರಸ್ತುತ ಹವಾಮಾನ ವೈಪರೀತ್ಯ, ಮಳೆ ಅಭಾವದಿಂದಾಗಿ ಹರಡುತ್ತಿರುವ ರೋಗಗಳಿಂದ ಕಬ್ಬು ಸಂರಕ್ಷಣೆ ಮಾಡುವುದು ಅವಶ್ಯಕವಾಗಿದ್ದು, ಬೆಳೆಗಾರರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ತಜ್ಞ ಮಂಜುನಾಥ ಚೌರಡ್ಡಿ ತಿಳಿಸಿದರು.

ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಕೃಷಿ ಜಮೀನಿನಲ್ಲಿ ಬುಧವಾರ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಹಾಗೂ ಶ್ರೀ ಸಂಗಮ ಸಕ್ಕರೆ ಕಾರ್ಖಾನೆ ಹಿಡಕಲ್ ಡ್ಯಾಂ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಬ್ಬು ಬೆಳೆಯಲ್ಲಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಸಕ್ತ ಹಂಗಾಮಿನಲ್ಲಿ ಮಳೆಯಿಲ್ಲದೆ ಕಬ್ಬು ಬೆಳೆ ಅನೇಕ ರೋಗ ಹಾಗೂ ಕೀಟಗಳಿಗೆ ತುತ್ತಾಗುತ್ತಿದೆ. ಅದನ್ನು ತಪ್ಪಿಸಲು ರಾಸಾಯನಿಕ ಹಾಗೂ ಜೈವಿಕ ಕೀಟನಾಶಕಗಳ ಬಳಕೆ ಮಾಡಬೇಕು ಎಂದರು.

ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ಕಬ್ಬು ಸೇರಿ ಎಲ್ಲ ಕೃಷಿ ಬೆಳೆಗಳ ಮೇಲೆ
ಪರಿಣಾಮ ಉಂಟು ಮಾಡಿದೆ. ಅಲ್ಲದೆ, ಹೊಸದಾಗಿ ನಾಟಿ ಮಾಡಿರುವ ಕಬ್ಬು ನಾನಾ ರೋಗಗಳಿಗೆ ತುತ್ತಾಗುತ್ತಿವೆ. ಮಳೆಯಾಗದಿರುವ ಕಾರಣ ಕಬ್ಬು ಇಳುವರಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ರೈತರಾದ ನಿಂಗನಗೌಡ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಬಾಳಗೌಡ ಹರಗೌಡನವರ,
ಬಸವರಾಜ ಲೊಳಸುರೆ, ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಕಾರಿ ಆರ್.ವಿ.ರೇವಣ್ಣವರ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net