ರೈತರು ಹೈನೋದ್ಯಮ ಕಡೆಗಣಿಸಬಾರದು

Published on
ಗೌರಿಬಿದನೂರು :  ಬಯಲು ಸೀಮೆಯ ರೈತರು ಯಾವುದೇ ಕಾರಣಕ್ಕೂ ಹೈನೋದ್ಯಮ ಕಡೆಗಣಿಸಬಾರದು ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಜೆ .ಕಾಂತರಾಜು ಹೇಳಿದರು.
 ತಾಲೂಕಿನ ಮಲ್ಲಸಂದ್ರದಲ್ಲಿ ಗುರುವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಶಾಖೆ ಉದ್ಘಾಟಿಸಿ ಮಾತನಾಡಿ, ಹಿಂದೆ ಮಲ್ಲಸಂದ್ರ ಗ್ರಾಮದ ರೈತರು, ಕುಂಟ ಚಿಕ್ಕನಹಳ್ಳಿಗೆ ತೆರಳಿ ಹಾಲನ್ನು ಡೇರಿಗೆ ಹಾಕಬೇಕಾಗಿತ್ತು. ಇದರಿಂದ ರೈತರಿಗೆ ತೊಂದರೆಯಾಗುತ್ತಿತ್ತು. ರೈತರ ಬಹು ದಿನಗಳ ಬೇಡಿಕೆಯಂತೆ ಈಗ ಮಲ್ಲಸಂದ್ರದಲ್ಲೇ ಹಾಲು ಉತ್ಪಾದಕರ ಸಂಘದ ಶಾಖೆ ಪ್ರಾರಂಭಿಸಲಾಗಿದೆ. ಸಂಘವನ್ನು ಲಾಭದ ಹಾದಿಯಲ್ಲಿ ಕೊಂಡೊಯ್ಯಬೇಕು ಎಂದರು.
 ಉದ್ಯಮಿ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಕೃಷಿಕರಿಗೆ ಹೈನುಗಾರಿಕೆ ಉಪ ಕಸುಬಾಗಿದೆ. ಕೃಷಿಯಲ್ಲಿ ನಷ್ಟ ಅನುಭವಿಸಿದಾಗ ಹೈನೋದ್ಯಮ ಕುಟುಂಬದ ಕೈಹಿಡಿಯಲಿದೆ. ಆದ್ದರಿಂದ ಕೃಷಿ ಜತೆಗೆ ಹೈನುಗಾರಿಕೆಯನ್ನೂ ಮುಂದುವರಿಸಿಕೊಂಡು ಹೋಗಬೇಕು. ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ತಿಳಿಸಿದರು.
 ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶೂಲಪಾಣಿ, ಉಪಾಧ್ಯಕ್ಷ ನಾಗಪ್ಪ, ನಿರ್ದೇಶಕರಾದ ಎಂ. ಗಂಗಾಧರಪ್ಪ, ಎಸ್ ಗಂಗಪ್ಪ, ಭಾಗ್ಯಮ್ಮ, ಸಿಂಧು, ಜೆ. ನವೀನ್, ಎಂ. ಕೆ. ಗೋಪಾಲ್, ಲಕ್ಷ್ಮೀಪತಿ, ಎಂ.ಡಿ, ಜಯಣ್ಣ, ಶ್ರೀನಿವಾಸ್, ನಾಗಿರೆಡ್ಡಿ,  ಮುಖಂಡರಾದ  ಅಬ್ದುಲ್, ಕಲ್ಲಿನಾಯಕನಹಳ್ಳಿ ಮುನಿಯಪ್ಪ,  ನಾಗಾರ್ಜುನ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net