ರೈತರು ಹಾಗೂ ಸೈನಿಕರು ಆರೋಗ್ಯದಿಂದ ಕೂಡಿರಬೇಕು

24 ckm 4
ಚಿಕ್ಕಮಗಳೂರು ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿ ಬುಧವಾರ ತಾಲೂಕು ರೈತ ಸಂಘ, ಎಪಿಎಂಸಿ ಕಿಸಾ ನ್ ವರ್ತಕರ ಸಂಘ, ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
Published on

ಚಿಕ್ಕಮಗಳೂರು: ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಗಡಿಕಾಯುವ ಸೈನಿಕರು ಆರೋಗ್ಯದಿಂದ ಜೀವಿಸಿದಾಗ ಮಾತ್ರ ಭಾರತವು ಸದೃಢವಾಗುವ ಜೊತೆಗೆ ಜಗತ್ತಿನ ಮುಂದೆ ಬಲಿಷ್ಟವಾಗಿ ನೆಲೆಯೂರಲು ಸಾಧ್ಯ ಎಂದು ಮಾಜಿ ಸೈನಿಕ ಸಿ.ಟಿ.ಗೋಪಾಲಕೃಷ್ಣ ತಿಳಿಸಿದರು.

ನಗರದ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿ ಬುಧವಾರ ತಾಲೂಕು ರೈತ ಸಂಘ, ಎಪಿಎಂಸಿ ಕಿಸಾ ನ್ ವರ್ತಕರ ಸಂಘ, ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇಶವು ರೈತಾಪಿ ವರ್ಗದ ನಾಡು. ಕೃಷಿಯಿಂದಲೇ ವಿಶ್ವಾದ್ಯಂತ ಪ್ರಸಿದ್ಧಿ ಪಡೆದುಕೊಂಡಿರುವ ಭಾರತದ ರೈತರ ಜೀವನ ಬಹಳಷ್ಟು ಹೋರಾಟಗಳಿಂದ ಕೂಡಿದೆ. ಬೆಳೆಗಳಿಗೆ ಸಮರ್ಪಕವಾದ ಬೆಲೆಯಿಲ್ಲದೇ ಕಂಗಾಲಾಗಿದ್ದಾರೆ. ಹೀಗಾಗಿ ರೈತರನ್ನು ಸಮಾಜದ ಆಸ್ತಿ ಎಂದು ಭಾವಿಸಿ ಅವರ ಉನ್ನತಿಗಾಗಿ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರೈತರ ಆರೋಗ್ಯದ ದೃಷ್ಟಿಯಿಂದ ರೈತ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಹಾಗೂ ದಂತ ತಪಾಸಣಾ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ. ರೈತರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಶರೀರವನ್ನು ಸುಸ್ಥಿರವಾಗಿರಲು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ದಂತ ವೈದ್ಯ ಡಾ. ಕೆ.ಸುಂದರೇಗೌಡ ಮಾತನಾಡಿ, ಶರೀರಕ್ಕೆ ದಂತಗಳು ಅಮೂಲ್ಯವಾದದು. ಹುಳುಕು ಅಥವಾ ಇನ್ನಿತರೆ ಸಮಸ್ಯೆಗಳು ಉಂಟಾದರೆ ಶಾಶ್ವತವಾಗಿ ಹಲ್ಲನ್ನು ಕಳೆದುಕೊಳ್ಳಬೇಕು. ಹೀಗಾಗಿ ಕನಿಷ್ಟ ಆರು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು. ಊಟ ಹಾಗೂ ತಿಂಡಿಯ ನಂತರ ಬಾಯಿ ಸ್ವಚ್ಚಗೊಳಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಸುನೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರ ಜೀವನದಲ್ಲಿ ಕುಟುಂಬ ನಿರ್ವಹಣೆ, ದುಡಿಮೆ ಹಾಗೂ ಮಕ್ಕಳ ಪಾಲನೆ ಮಾಡುತ್ತಲೇ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿಲ್ಲ. ಆ ನಿಟ್ಟಿನಲ್ಲಿ ರೈತರ ಆರೋಗ್ಯ ಕಾಪಾಡಲು ಶಿಬಿರ ಆಯೋಜಿಸಿದ್ದು ಪ್ರತಿಯೊಬ್ಬರು ಭಾಗ ವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಸುಮಾರು ೫೦೦ ಹೆಚ್ಚು ರೈತರು ಆರೋಗ್ಯ ತಪಾಸಣೆ ಹಾಗೂ ೧೦೦ಕ್ಕೂ ಹೆಚ್ಚು ಮಂದಿ ದಂತ ತಪಾಸಣೆಗೊಳಗಾದರು. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಸಲಹಾ ಸಮಿತಿ ಅಧ್ಯಕ್ಷ ಕೆ.ಕೆ.ಕೃಷ್ಣೇಗೌಡ, ನಾಗರಿಕ ಹಿತರಕ್ಷಣ ಸಮಿತಿ ಪ್ರಧಾನ ಕಾರ್ಯದರ್ಶಿ ಜೇಮ್ಸ್, ಎಪಿಎಂಸಿ ಕಿಸಾನ್ ವರ್ತಕರ ಸಂಘದ ಅಧ್ಯಕ್ಷ ಪುನೀತ್, ಉಪಾಧ್ಯಕ್ಷ ಶ್ರೀಧರ್, ವೈದ್ಯರಾದ ನಿರಂಜನ್, ಮಧುಕರ್ ರೈತ ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಕೆ.ಟಿ.ಸುನಿಲ್‌ಕುಮಾರ್, ಎಂ.ಚAದ್ರಶೇಖರ್, ರಾಮೇಗೌಡ, ನಜ್ಮಾ ಅಲಿ, ಅರು ಣಾಕ್ಷಿ, ಕಾಂತರಾಜು, ಪರ್ವತೇಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net