ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಲಿ

2
Published on

ಮುರಗೋಡ: ಸಮೀಪದ ಮರಕುಂಬಿ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆಶ್ರಯದಲ್ಲಿ ಬುಧವಾರ ಬೀಜೋಪಚಾರ ಮತ್ತು ಸುರತ ಕೀಟನಾಶಕ ಬಳಕೆ ಆಂದೋಲನ ಕಾರ್ಯಕ್ರಮ ಜರುಗಿತು.

ಮುರಗೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ.ಎ. ಅಮಟೆ ಮಾತನಾಡಿ, ರೆತರು ಒಣ ಬೇಸಾಯ ಮಾಡುತ್ತಿದ್ದರೆ ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಬೇಕು. ಬೀಜೋಪಚಾರ ಮತ್ತು ಬೆಳೆ ಸಂರಕ್ಷಣೆ, ಕೀಟನಾಶಕ ಬಳಕೆ ವಿಧಾನ ಅರಿಯಬೇಕು. ಬಿತ್ತನೆ ವಿಧಾನ, ಸಗಣಿ ಗೊಬ್ಬರ ಬಳಕೆ ತಿಳಿಸಿಕೊಟ್ಟರು. ಡಿಟಿಡಿಸಿ ಕಷಿ ಅಧಿಕಾರಿ ರುಬಿನಾ ಚಾಲನೆ ನೀಡಿದರು. ನಿವತ್ತ ಗ್ರಾಮ ಸೇವಕ ವಿ.ಎಂ. ಹೊಸೂರ, ಶ್ವೇತಾ ಕೋಟಗಿ, ರವಿ ಕುರಬೇಟ, ಮಹಾಂತೇಶ ಕೌಜಲಗಿ, ಮೌಳೇಶ ಬೆಲವಾಡ, ಎಸ್​.ಎಸ್​. ಮಠಪತಿ ತರಬೇತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net