ರೈತರು ಸಹಕರಿಸಿದರೆ ಶೀಘ್ರ 25 ಸಾವಿರ ಲೀಟರ್ ಹಾಲು ಸಂಗ್ರಹ

21-22
ಕಲ್ಲೇಹೋಳ ಕ್ರಾಸ್‌ನಲ್ಲಿರುವ ಅರ್‌ಜೆಡಿ ಸಭಾಂಗಣದಲ್ಲಿ ಗುರುವಾರ ಗಣೇಶ ಹಾಲು ಸಂಗ್ರಹಣಾ ಕೇಂದ್ರದ ಎಂಟನೇ ವಾರ್ಷಿಕೋತ್ಸವ ಜರುಗಿತು. ಕೇಂದ್ರದ ಮುಖ್ಯಸ್ಥ ಉಮೇಶ ದೇಸಾಯಿ, ಮೋತಿರಾಮ ದೇಸಾಯಿ, ರುಕ್ಮಿಣಿ ದೇಸಾಯಿ, ಸುಧಾಕರ ಕರಟೆ, ಪ್ರವೀಣ ದೇಸಾಯಿ, ಕಿರಣ ದೇಸಾಯಿ, ಜಾವೇದ್ ಜಮಾದಾರ, ಮಧು ಬೆಳಗಾಂವಕರ, ಯೋಗಿತಾ ದೇಸಾಯಿ, ಸೂರಜ್ ದೇಸಾಯಿ ಇದ್ದರು.
Published on

ಬೆಳಗಾವಿ: ರೈತ ನೆಮ್ಮದಿಯಿಂದ ಬದುಕಿದರೆ ಮಾತ್ರ ನಾವೆಲ್ಲ ಬದುಕುಳಿಯುತ್ತೇವೆ. ರೈತರಿಗೆ ಗರಿಷ್ಠ ಲಾಭ ಸಿಗಲಿ ಎಂಬ ಉದ್ದೇಶದಿಂದ ಗಣೇಶ ಹಾಲು ಸಂಗ್ರಹಣಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ರೈತರು ಗಣೇಶ ಹಾಲು ಸಂಗ್ರಹಣಾ ಕೇಂದ್ರವನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ 25 ಸಾವಿರ ಲೀಟರ್ ಹಾಲು ಸಂಗ್ರಹ ಮಾಡಲಾಗುವುದು ಎಂದು ಗಣೇಶ ಹಾಲು ಸಂಗ್ರಹಣಾ ಕೇಂದ್ರದ ಮುಖ್ಯಸ್ಥ ಉಮೇಶ ದೇಸಾಯಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಕಲ್ಲೇಹೋಳ ಕ್ರಾಸ್‌ನಲ್ಲಿರುವ ಅರ್‌ಜೆಡಿ ಸಭಾಂಗಣದಲ್ಲಿ ಗುರುವಾರ ಗಣೇಶ ಹಾಲು ಸಂಗ್ರಹಣಾ ಕೇಂದ್ರದ ಎಂಟನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಯಾವಾಗಲೂ ಇತರ ಹಾಲು ಉತ್ಪಾದನಾ ಕೇಂದ್ರಗಳಿಗಿಂತ ಹೆಚ್ಚಿನ ದರ ನೀಡುತ್ತೇವೆ. ಆದರೆ, ಈ ದರ ರೈತರಿಗೆ ತಲುಪುತ್ತಿಲ್ಲ. ಸೊಸೈಟಿಗಳು ಕೂಡ ಹೆಚ್ಚಿನ ದರವನ್ನು ರೈತರಿಗೆ ನೀಡುವ ಮೂಲಕ ರೈತರ ಹಿತಾಸಕ್ತಿ ಕಾಪಾಡಬೇಕು ಎಂದರು.

ಶಿವಾಜಿ ಮಹಾರಾಜರು ರೈತರ ರಾಜರಾಗಿದ್ದರು, ಆದ್ದರಿಂದ ಅವರ ಆದರ್ಶ ಅನುಸರಿಸಿ ಕಷ್ಟಪಟ್ಟು ಕೆಲಸ ಮಾಡಿ ಹೆಚ್ಚಿನ ಲಾಭಾಂಶವನ್ನು ರೈತರಿಗೆ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಎಮ್ಮೆಯ ಹಾಲಿನ ದರ 48 ರೂ., ಹಸು ಹಾಲಿನ ದರ 36 ರೂ. ಇದೆ ಎಂದ ಅವರು, ಭವಿಷ್ಯದಲ್ಲಿ ಇನ್ನೂರು ಜನರಿಗೆ ಈ ಕೇಂದ್ರದ ಮೂಲಕ ಉದ್ಯೋಗ ಕಲ್ಪಿಸಲಾಗುವುದು ಎಂದರು.

ಪಶುವೈದ್ಯ ಡಾ.ಆನಂದ ಪಾಟೀಲ, ರೈತರಿಗೆ ಹಾಲಿನ ವ್ಯಾಪಾರ, ಅದರ ಸಮಸ್ಯೆಗಳು, ಪರಿಹಾರಗಳು, ಹಾಲು ಇಳುವರಿ ಹೆಚ್ಚಿಸುವ ಮಾರ್ಗಗಳು, ಪಶುಪಾಲನೆ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಗರಿಷ್ಠ ಪ್ರಮಾಣದ ಹಾಲು ಪೂರೈಕೆ ಮಾಡುವ ರೈತರು, ಸೊಸೈಟಿ ಸಂಸ್ಥೆಗಳಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಯಿತು.

ಗಣೇಶ ಹಾಲು ಸಂಗ್ರಹಣಾ ಕೇಂದ್ರದ ಸಂಸ್ಥಾಪಕ ಮೋತಿರಾಮ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಸುಧಾಕರ ಕರಟೆ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣ ದೇಸಾಯಿ ಹಾಗೂ ವ್ಯವಸ್ಥಾಪಕ ಕಿರಣ ದೇಸಾಯಿ, ಗ್ರಾಪಂ ಅಧ್ಯಕ್ಷ ಜಾವೇದ್ ಜಮಾದಾರ, ರುಕ್ಮಿಣಿ ಮೋತಿರಾಮ ದೇಸಾಯಿ, ಮಧು ಬೆಳಗಾಂವಕರ, ಗ್ರಾಪಂ ಮಾಜಿ ಅಧ್ಯಕ್ಷೆ ಯೋಗಿತಾ ದೇಸಾಯಿ, ಸೂರಜ್ ದೇಸಾಯಿ, ಡಿ. ಬಿ.ಪಾಟೀಲ, ನೀಲಕಂಠ ಕುರಬೂರ, ಅಪ್ಪಾಜಿ ಮೋರೆ, ಅರವಿಂದ ವೈ.ಪಾಟೀಲ, ಗೋಪಾಲಗೌಡ, ಎಲ್.ಡಿ.ಚೌಗುಲೆ, ಎನ್.ಒ. ಚೌಗುಲೆ, ಅರುಂಧತಿ ದೇಸಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net