ರೈತರು ಮಾಹಿತಿ ಪಡೆದು ಬೇಸಾಯ ಮಾಡಿ

5ss2
Published on

ಶನಿವಾರಸಂತೆ: ರೈತರು ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ತೋಟದ ಬೆಳೆ ಬೇಸಾಯ ಮಾಡಿದರೆ ಹೆಚ್ಚಿನ ಇಳುವರಿ ಮತ್ತು ಲಾಭ ಗಳಿಸಬಹುದು ಎಂದು ಸೋಮವಾರಪೇಟೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯ ಸಂಪನ್ಮೂಲ ವ್ಯಕ್ತಿ ಡಾ.ವೀರೇಂದ್ರ ಕುಮಾರ್ ಹೇಳಿದರು.

ಸಮೀಪದ ಬೆಸೂರು ಗ್ರಾಮದ ಹಾಲು ಉತ್ಪಾದಕರ ಸಂಘದ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳ ಬೇಸಾಯ ಕ್ರಮಗಳು ಮತ್ತು ಸಸ್ಯಸಂರಕ್ಷಣೆ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ರೈತರು ತೋಟದ ಬೆಳೆಗಳ ಬಗ್ಗೆ ವೈಜ್ಞಾನಿಕ ಕ್ರಮ, ಔಷಧ ಸಿಂಪಡಣೆ ಕ್ರಮ ಸೇರಿದಂತೆ ತೋಟದ ಬೆಳೆಗಳ ನಿರ್ವಹಣೆ, ರೋಗ ಹತೋಟಿ ಮುಂತಾದವುಗಳ ಬಗ್ಗೆ ಹತ್ತಿರದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಸೂಕ್ತ ಸಲಹೆ ಪಡೆದುಕೊಂಡು ಅದರಂತೆ ಬೇಸಾಯ ಕ್ರಮ ಅನುಸರಿಸಿದಲ್ಲಿ ತೋಟದ ಬೆಳೆಗಳಲ್ಲಿ ಹೆಚ್ಚಿನ ಇಳುವರಿಯ ಜತೆಯಲ್ಲಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು.

ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎ. ಸವಿತಾ, ಸದಸ್ಯರಾದ ರವಿ, ಕಿಶಾನ್, ಕೊಡ್ಲಿಪೇಟೆ ತೋಟಗಾರಿಕೆ ಇಲಾಖೆ ಅಧಿಕಾರಿ ಈಶ್ವರ್ ಕಲ್ಯಾಣಿ, ಕುಶಾಲನಗರ ಸಹಾಯಕ ತೋಟಗಾರಿಕೆ ಅಧಿಕಾರಿ ಎಂ.ವಿ.ಕಾವ್ಯಾ, ಜೇನು ಕೃಷಿ ಸಹಾಯಕ ಅಧಿಕಾರಿ ಎಸ್.ಎಸ್. ರಾಜು, ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ಎ. ಶಿವಕುಮಾರ್, ಮಹೇಶ್ ರೂಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net