ರೈತರು ಜಮೀನುಗಳಿಗೆ ಲಗ್ಗೆ ಇಟ್ಟ ಆನೆಗಳು

Oplus_131072
Oplus_131072
Published on

ನಂಜನಗೂಡು: ತಾಲೂಕಿನ ಮಡುವಿನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಆನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸಿವೆ. ಕಾಡಿನಿಂದ ನಾಡಿಗೆ ಬಂದಿದ್ದ 3 ಕಾಡಾನೆಗಳು ಮಡುವಿನಹಳ್ಳಿ, ಈರೇಗೌಡನ ಹುಂಡಿ, ಗಣೇಶಪುರ, ಚಿಲ್ಕಳ್ಳಿ ಸುತ್ತಮುತ್ತ ಗ್ರಾಮಗಳ ರೈತರು ಜಮೀನಿನಲ್ಲಿ ಬೆಳೆದಿದ್ದ ಹುರುಳಿ, ಬಾಳೆ, ಟೊಮ್ಯಾಟೊ ಬೆಳೆಗಳನ್ನು ನಾಶ ಮಾಡಲು ಯತ್ನಿಸಿದವು.

ಆನೆಗಳು ಜಮೀನುಗಳಿಗೆ ಲಗ್ಗೆ ಇಟ್ಟಿರುವ ಸುದ್ದಿ ರೈತರಿಗೆ ತಿಳಿಯುತ್ತಿದ್ದಂತೆ ತಮ್ಮ ತಮ್ಮ ಜಮೀನುಗಳಿಗೆ ಗುಂಪಾಗಿ ತೆರಳಿ ಆನೆಗಳನ್ನು ಕಾಡಿಗೆ ಓಡಿಸಲು ಹರಸಾಹಸಪಟ್ಟರು. ಈಗಾಗಲೇ ರೈತರು ಬೆಳೆದಿರುವ ಹುರುಳಿ ಬೆಳೆ ಕಟಾವು ಹಂತಕ್ಕೆ ಬಂದಿದ್ದು, ಬೆಳೆ ಕಟಾವಿಗೆ ಮುಂಜಾನೆ 5 ಗಂಟೆಗೆ ರೈತರು ಜಮೀನುಗಳಿಗೆ ತೆರಳುತ್ತಿದ್ದರು.

ಆದರೆ ಆನೆಗಳ ದಾಳಿಯಿಂದ ಭಯ ಮನೆ ಮಾಡಿದ್ದು, ಜಮೀನುಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ. ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾದ ಅರಣ್ಯ ಇಲಾಖೆ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿರುವ ರೈತರು, ಕನಿಷ್ಠ ಆನೆಗಳನ್ನು ಓಡಿಸಲು ಸಹ ಸ್ಥಳಕ್ಕೆ ಬಾರದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net