ರೈತರು, ಗ್ರಾಹಕರ ಸಹಕಾರ ಇದ್ದರೆ ಮಾತ್ರ ಸಾಧನೆ ಸಾಧ್ಯ

11RAIBAG1
Published on

ರಾಯಬಾಗ: ರೈತರ ಮತ್ತು ಗ್ರಾಹಕರ ಸಹಕಾರದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಇದಕ್ಕೆ ನಿದರ್ಶನ ಎಂಬಂತೆ ಟ್ರ‍್ಯಾಕ್ಟರ್ ಮಾರಾಟದಲ್ಲಿ ಹಿರೇಮಠ ಟ್ರಾಕ್ಟರ್ಸ್ ತೋರಿಸಿಕೊಟ್ಟಿದೆ ಎಂದು ಬೆಂಗಳೂರಿನ ಐಷರ್ ಟ್ರ‍್ಯಾಕ್ಟರ್ಸ್ ಅಸೋಸಿಯೇಟ್ ಉಪಾಧ್ಯಕ್ಷ ಸೋಮಶೇಖರ ಹೇಳಿದರು.

ಪಟ್ಟಣದ ಮಹಾವೀರ ಭವನದ ಆವರಣದಲ್ಲಿ ಹಿರೇಮಠ ಟ್ರ್ಯಾಕ್ಟರ್ ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಐಷರ್ ಟ್ರಾಕ್ಟರ್ಸ್ ಗ್ರಾಹಕರ ಮೇಳ ಹಾಗೂ ೧೦೧ ಐಷರ್ ಟ್ರಾಕ್ಟರ್ಸ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರೇಮಠ ಟ್ರಾಕ್ಟರ್ಸ್ ಮಾಲೀಕ ರಾಜಶೇಖರ ಹಿರೇಮಠ ಮಾತನಾಡಿ, ರೈತರ ಸಹಕಾರ ಮತ್ತು ಬೆಂಬಲದಿಂದ ಇಂದು ೧೦೧ ಟ್ರ‍್ಯಾಕ್ಟರ್ ರೈತರಿಗೆ ಹಸ್ತಾಂತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ೪೧೨ ಟ್ರ್ಯಾಕ್ಟರ್ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಭೂಪಾಲ ಹೆಡ್ ಮಾರ್ಕೆಟಿಂಗ್ ಬಿ.ಕೆ.ಪುನೀತ ಕುರಂಬಯ್ಯ, ವಿಶ್ವೇಶ್ ಎಂ.ಎಸ್., ಜಿ.ಮೂರ್ತಿ, ಶಂಕರ ಅರನಾಡಿ, ಪ್ರವೀಣ ಕುಮಾರ ಎಂ.ಪಿ, ಅಜಯ ರಾಮದುರ್ಗ, ದೀಪಕ ಗಾಯಕವಾಡ, ಸಂಜಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net