ರೈತರು ಗುಣಮಟ್ಟದ ಹಾಲನ್ನು ಪೂರೈಸಲಿ

Published on

ಚಾಮರಾಜನಗರ : ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ರೈತರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು ಎಂದು ಸಂಘದ ವಿಸ್ತರಣಾಧಿಕಾರಿ ದಯಾನಂದ್ ಹೇಳಿದರು.

ತಾಲೂಕಿನ ಹೊಂಗನೂರು ಗ್ರಾಮದ ಹಾಲು ಉತ್ಪಾದಕರ ಸಂಹಕಾರ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2024-25 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಂಘವು 2.38 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲೂ ಸಂಘಕ್ಕೆ ರೈತರು ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಈ ಮೂಲಕ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಸಂಘದ ಅಧ್ಯಕ್ಷ ಆರ್.ನಂಜಯ್ಯ, ಉಪಾಧ್ಯಕ್ಷೆ ಟಿ.ರಂಗಮ್ಮ, ಮಾಜಿ ಅಧ್ಯಕ್ಷ ಆರ್.ಮಹಾದೇವಸ್ವಾಮಿ, ನಿರ್ದೇಶಕರಾದ ಬಿಳಿಗಿರಿರಂಗನಾಯ್ಕ, ಪ್ರಕಾಶ್, ಪುಟ್ಟರಾಜು, ಸುಶೀಲಮ್ಮ, ಸುಧಾ, ಯಶೋದಮ್ಮ, ಗೌರಮ್ಮ, ಸಂಘದ ಮುಖ್ಯ ನಿರ್ವಾಹಕ ಪಿ.ಮಹೇಶ್, ಹಾಲು ಪರೀಕ್ಷಕ ಎನ್.ತಮ್ಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net