ರೈತರು ಗುಣಮಟ್ಟದ ಕಬ್ಬು ಪೂರೈಸಲಿ

7
Published on

ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಪೂರೈಸುವ ಕಬ್ಬಿನ ತೂಕದಲ್ಲಿ 1 ಕೆಜಿ ಮೋಸ ಆಗಿದೆ ಎಂದು ದೃಢಪಡಿಸಿದಲ್ಲಿ ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ಸ್ಥಳೀಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ 23ನೇ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪ್ರದೀಪನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಹಂಗಾಮಿನಲ್ಲಿಯೂ ನಮ್ಮ ಸುತ್ತಮುತ್ತಲಿನ ವಿವಿಧ ಕಾರ್ಖಾನೆಗಳ ವಿರುದ್ಧ ತೂಕದಲ್ಲಿ ಮೋಸವಾಗಿರುವ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಒಮ್ಮೆಯೂ ನಮ್ಮ ಕಾರ್ಖಾನೆ ವಿರುದ್ಧ ಯಾವುದೇ ನಕಾರಾತ್ಮಕ ಅಭಿಪ್ರಾಯ ಬಾರದಿರುವುದು ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದರು.

ಸಹಕಾರಿ ತತ್ತ್ವದ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಉತ್ತಮ ಗುಣಮಟ್ಟದ ಕಬ್ಬು ಪೂರೈಸುವ ಮೂಲಕ ಕಾರ್ಖಾನೆ ಗಟ್ಟಿಗೊಳಿಸಬೇಕು. ಕಳೆದ 20 ವರ್ಷಗಳಿಂದ ನಮ್ಮ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 350 ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ಪಾಟೀಲ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಹಾಗೂ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.

ಕಾಯಂಗೊಂಡ ಕಾರ್ಮಿಕರಿಗೆ ಆದೇಶ ಪತ್ರ ವಿತರಿಸಲಾಯಿತು. ಬಾಡಗಿಯ ವನಸಿದ್ಧ ಮಹಾರಾಜರು, ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಟಿ.ಬೊರಗಾವಿ, ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋರೆ, ನಿರ್ದೇಶಕರಾದ ಜಿ.ಎಂ.ಜತ್ತಿ, ಮಲ್ಲಿಕಾರ್ಜುನ ಗೊಠಖಿಂಡಿ, ಜಿ.ಎಂ.ತೆವರಮನಿ, ಎಸ್.ಡಿ.ನಂದೇಶ್ವರ, ಎಸ್.ಜೆ.ಪಾಟೀಲ, ಆರ್.ವಿ.ಕುಲಕರ್ಣಿ, ಎಸ್.ಎಸ್.ನಾಯಿಕ, ಎಸ್.ಎಚ್.ನಾಯಿಕ, ಆರ್.ಎ.ಪಟ್ಟಣ, ಎಚ್.ಐ.ಜಗದೇವ, ವಿ.ಎಂ.ಪಾಟೀಲ, ಕಚೇರಿ ಅಧೀಕ್ಷಕ ಸುರೇಶ ಠಕ್ಕಣವರ, ಲೆಕ್ಕಾಧಿಕಾರಿ ಎ.ಸಿ.ರಾಚಪ್ಪನವರ ಹಾಗೂ ರೈತರು ಪಾಲ್ಗೊಂಡಿದ್ದರು.18-1

===================================

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net