ರೈತರು ಆತ್ಮಹತ್ಯೆ ದಾರಿ ಹಿಡಿಯಬಾರದು

29-33
ಸತ್ತಿ ಗ್ರಾಮದಲ್ಲಿ ಭಾನುವಾರ ಬಾಳಕೃಷ್ಣ ಮಹಾರಾಜರ ಪುಣ್ಯಸ್ಮರಣೆ ಜರುಗಿತು. ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ, ಡಾ. ವಿವೇಕಾನಂದ ದೇವರು, ಹಾರಿಕಾ ಮಂಜುನಾಥ, ಅಭಿನವ ಮಂಜುನಾಥ ಸ್ವಾಮೀಜಿ ಇದ್ದರು.
Published on

ನಂದೇಶ್ವರ, ಬೆಳಗಾವಿ: ಭೂತಾಯಿಯ ಮೇಲೆ ಶ್ರದ್ಧೆಯಿಟ್ಟು ದುಡಿದರೆ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಕ್ಷಣಿಕ ಕಷ್ಟಗಳಿಗಾಗಿ ರೈತರು ಆತ್ಮಹತ್ಯೆಯಂತಹ ತೀರ್ಮಾನ ಕೈಗೊಳ್ಳಬಾರದು ಎಂದು ರಾಯಚೂರಿನ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಬಾಳಕೃಷ್ಣ ಮಹಾರಾಜರ 25ನೇ ವರ್ಷದ ಪುಣ್ಯಾರಾಧನೆಯ ರಜತ ಮಹೋತ್ಸವದ ಅಂಗವಾಗಿ ಭಾನುವಾರ ಜರುಗಿದ ಮಹಿಳಾ ಗೋಷ್ಠಿಯಲ್ಲಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಯಾರ ಮುಂದೆಯೂ ಕೈ ಚಾಚುವಂತಾಗಬಾರದು.

ಕೃಷಿಯಲ್ಲಿ ಮಿಶ್ರ ಬೆಳೆ ಬೆಳೆಯಲು ರೈತರು ಮನಸ್ಸು ಮಾಡಬೇಕು. ಒಂದು ಬೆಳೆ ಕೈಕೊಟ್ಟರೂ ಬೇರೊಂದು ಬೆಳೆ ಕೈ ಹಿಡಿಯುತ್ತದೆ ಎಂದರು.

ಕೃಷಿ ಕೆಲಸ ಸಣ್ಣದಿರಲಿ ದೊಡ್ಡದಿರಲಿ ನಿಷ್ಠೆಯಿಂದ ಕೆಲಸ ಮಾಡಬೇಕು. ಗಂಡ ಅಮೂಲ್ಯವಾದ ಮಾಂಗಲ್ಯ ಹಾಗೂ ಕಾಲುಂಗುರ ಹೆಣ್ಣಿಗೆ ಕೊಡುಗೆಯಾಗಿ ನೀಡಿರುತ್ತಾನೆ. ಹೆಣ್ಣು ಮಕ್ಕಳು ಗಂಡನಿಗೆ ಬಂಗಾರಬೇಕೆಂದು ಕಾಡಿಸಬಾರದು. ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದು ಸಾಮಾನ್ಯ. ಆದರೆ ನನ್ನ ಯಶಸ್ಸಿನ ಹಿಂದೆ ನನ್ನ ಗಂಡ ಇದ್ದಾನೆಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ, ಗುರು ಹಿರಿಯರು ವಚನ ಸಾಹಿತ್ಯ ಓದುವಂತೆ ಮಕ್ಕಳಿಗೆ ಪ್ರೇರಣೆ ನೀಡಬೇಕು. ಧಾರವಾಹಿಗಳಿಂದ ದೂರ ಉಳಿದಷ್ಟು ನೆಮ್ಮದಿ ಜಾಸ್ತಿ ಸಿಗುತ್ತದೆ ಎಂದರು.
ಗುಣದಾಳದ ಡಾ. ವಿವೇಕಾನಂದ ದೇವರು ನೇತೃತ್ವ ವಹಿಸಿದ್ದರು. ಕ್ಯಾರಗುಡ್ಡ ಆವಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಶೈಲ ಜಕ್ಕಪ್ಪನವರ, ಶ್ರೀಶೈಲ ಆಳಂದ, ಶಂಕರ ಮಟ್ಟೆಪ್ಪನವರ, ಆನಂದಕುಮಾರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net