ರೈತರಿಗೆ ಪರಿಹಾರದ ಧನದ ಚೆಕ್​ ವಿತರಣೆ

09 hbd 02
Published on

ಚಿಟಗುಪ್ಪ: ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯ ಸಮಯದಲ್ಲಿ  ಬೀದರ್ ದಕ್ಷಿಣ ಕ್ಷೇತ್ರದ ವಿಠ್ಠಲಪುರ ಹಾಗೂ ಕಾರಕಪಳ್ಳಿ ಗ್ರಾಮದ ರೈತರಿಗೆ ಚಾಂಗಲೇರಾ ದೇವಸ್ಥಾನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ  ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪರಿಹಾರ ಚೆಕ್ ವಿತರಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡ ರೈತರಿಗೆ ಆಸರೆಯಾಗಿದ್ದ  ಎಮ್ಮೆ, ಮತ್ತು ಆಕಳು ಸಿಡುಲು ಬಡಿದು ಮೃತಪಟ್ಟ ಹಿನ್ನಲೆಯಲ್ಲಿ  ಶೀಘ್ರವೇ ಸರಕಾರದಿಂದ  ಪರಿಹಾರ ಒದಗಿಸುವದಾಗಿ ಭರವಸೆ ನೀಡಿದ್ದೆ. ಈ ಬಗ್ಗೆ ಕಂದಾಯ ಹಾಗೂ ಪಶು ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ

ವಿಠಲಪೂರ ಗ್ರಾಮದ ರೈತ ಸಾಯಪ್ಪ  ತಿಪ್ಪಾರೆಡ್ಡಿ ಅವರಿಗೆ ಸೇರಿದ  ಎಮ್ಮೆ ಹಾಗೂ ಕಾರಪಾಕಪಳ್ಳಿ ಗ್ರಾಮದ ಬಸವರಾಜ  ವೀರಪ್ಪ ಎಂಬ ರೈತನ ಆಕಳು  ಸಿಡಿಲು ಬಡಿದು  ಮೃತಪಪಟ್ಟಿದ್ದರಿಂದ ಈ ಇಬ್ಬರು ರೈತರಿಗೆ ತಲಾ ಪರಿಹಾರ ಧನದ ೩೭,೫೦೦ ಚೆಕ್ ವಿತರಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಮತ್ತು ಪಶುವೈಧ್ಯಕೀಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದಂತ್ತೆ ತನಿಖೆ ನಡೆಸಿ ದಾಖಲೆ ಸಲ್ಲಿಸಿದ  ಮೂರು ದಿನದಲ್ಲಿ  ರೈತರಿಗೆ ಪರಿಹಾರ ಧನದ ಚೆಕ್ ತಲುಪುವಂತೆ ಮಾಡಿದ್ದು ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘೀಸಿದರು. ಮುಂದೆಯು ಸಹ ಪ್ರತಿಯೋಬ್ಬ ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ಕಾನೂನು ಬದ್ಧವಾಗಿ ಜನರ ಸಮಸ್ಯೆಗಳಿಗೆ ಸ್ಪಂಧಿಸಿ ನೆರವಾಗಬೇಕೆಂದು ಹೇಳಿದರು. ಅಲ್ಲದೆ ರೈತರು ಪರಿಹಾರ ಧನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಚಿಟ್ಟಗುಪ್ಪ ತಾಪಂ ಇಒ ಅಕ್ರಮ ಪಾಷಾ, ಆಡಳಿತ ಅಧಿಕಾರಿ ಶರಣಯ್ಯಾ ಮಠಪತಿ, ಉಪ ತಹಶೀಲ್ದಾರ ನಸೀರ ಅಹ್ಮದ, ಕಂದಾಯ ನೀರಿಕ್ಷಕ ಮಹೇಶಕುಮಾರ ಅನಂತವಾಡಕರ್,  ಪಶುವೈದ್ಯಾಧಿಕಾರಿಗಳಾದ  ಬಸವರಾಜ,  ಕಾಶಿನಾಥ ಚಟ್ಟಳ್ಳಿ, ಗ್ರಾಮ ಆಡಳಿತ ಅಧಿಕಾರಿಗಳಾದ ನಿಂಗಪ್ಪ,  ಕೆರೆ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net