ರೈತರಿಗೆ ತೂಗುಗತ್ತಿಯಾದ ಜಿಲ್ಲಾಧಿಕಾರಿ ಆದೇಶ

kachodi srinivasa
ಕಚ್ಚೋಡಿ ಶ್ರೀನಿವಾಸ್
Published on

ಶೃಂಗೇರಿ: 2002ರಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾಗಿದ್ದ ಗೋಪಾಲಕೃಷ್ಣ ಗೌಡ ಅವರು ಜಿಲ್ಲೆಗೆ ಸಂಬಂಧಿಸಿದಂತೆ ಹೊರಡಿಸಿದ ಉದ್ಘೋಷಣೆದಿಂದ ರೈತರ ಹಾಗೂ ಜನಸಾಮಾನ್ಯರ ಬದುಕು ಅತಂತ್ರವಾಗಿದೆ ಎಂದು ಮಲೆನಾಡು ಹಕ್ಕುಗಳ ಹೋರಾಟ ಸಮಿತಿ ಗೌರವಾಧ್ಯಕ್ಷ ಕಚ್ಚೋಡಿ ಶ್ರೀ ನಿವಾಸ್ ಹೇಳಿದರು.
ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ವ್ಯಾಪ್ತಿಯ ಸುಮಾರು 1,38,258.19 ಎಕರೆ ಪ್ರದೇಶಗಳನ್ನು ಡಿಸಿ ರಿಸರ್ವ್ ಎಂದು ಗೋಪಾಲಕೃಷ್ಣ ಅವರು ಘೋಷಿಸಿದ್ದರು. ಇದರಿಂದ ನೂರಾರು ವರ್ಷಗಳಿಂದ ವಾಸವಾಗಿದ್ದ ಮನೆ ಹಾಗೂ ಜಮೀನು ಹೊಂದಿದ ಜನಸಾಮಾನ್ಯರಿಗೆ ಅವರು ಹೊರಡಿಸಿದ್ದ ಆದೇಶ ತೂಗುಗತ್ತಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ರೈತರು ಮತ್ತು ಜನಸಾಮಾನ್ಯರಿಂದ ಒತ್ತುವರಿ ಮಂಜೂರಾತಿಗೆ ಾರ್ಮ್ ನಂಬರ್ 50 ರಿಂದ 57 ಹಾಗೂ ವಾಸದ ಮನೆ ಅಕ್ರಮ ಸಕ್ರಮೀಕರಣಕ್ಕಾಗಿ ಾರ್ಮ್ ನಂಬರ್ 94ಸಿ ಮತ್ತು 94ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಿ ಅರ್ಜಿ ಪಡೆದು ಅವುಗಳು ಮಂಜೂರು ಮಾಡದೇ ಕಚೇರಿಗಳಲ್ಲಿ ಧೂಳು ತಿನ್ನುತ್ತಿವೆ ಎಂದು ದೂರಿದರು.
ಜಿಲ್ಲಾಧಿಕಾರಿ ಗೋಪಾಲಕೃಷ್ಣ ಗೌಡ ತಮ್ಮ ವರದಿಯಲ್ಲಿ ರೈತರ ಒತ್ತುವರಿ ಮತ್ತು ಅವರು ಕಟ್ಟಿಕೊಂಡು ವಾಸವಿರುವ ಮನೆ ಟಿಟಿ ದಂಡ ಕಟ್ಟಿಕೊಂಡಿರುವ ಪ್ರಕರಣಗಳು ಮತ್ತು ಸಾಗುವಳಿ ಚೀಟಿ ಮಂಜೂರಾತಿಗೆ ಬಾಕಿ ಇರುವ ಪ್ರಕರಣಗಳಿಗೆ ಅವರ ವರದಿಯಂತೆ ಒಟ್ಟು 79,905.28 ಎಕರೆ ಜಾಗ ಮಂಜೂರಾತಿಗೆ ಅವಶ್ಯಕವಿದೆ ಎಂಬ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಪರಿಗಣಿಸದೆ ಅವೈಜ್ಞಾನಿಕ ಅಸಮರ್ಪಕ ವರದಿ ಒಪ್ಪಿಕೊಂಡಿದೆ. ಇದರಿಂದ ನೈಜ ಲಾನುಭವಿಗಳ ಅರ್ಜಿಗಳು ವಿಲೇ ಆಗದೇ ಅವರ ಹಕ್ಕುಗಳ ಬಗ್ಗೆ ಹೋರಾಡುವುದು ಅನಿವಾರ್ಯವಾಗಿದೆ ಎಂದರು.
ಬದುಕಿಗಾಗಿ ಒತ್ತುವರಿ ಮಾಡಿಕೊಂಡಿರುವ ರೈತರ ಜಾಗ ಹಲವಾರು ವರ್ಷಗಳಿಂದ ಮಂಜೂರಾಗದೇ ಬಾಕಿ ಉಳಿದಿರುತ್ತದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಇಂತಹ ಅಸಂವಿಧಾನಿಕ ಆದೇಶವನ್ನು ಹಿಂದಕ್ಕೆ ಪಡೆದು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅರಣ್ಯ ಇಲಾಖೆ ಅನಾವಶ್ಯಕ ಕಿರುಕುಳದಿಂದ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಪದಾಧಿಕಾರಿಗಳಾದ ದಿನೇಶ್ ಅಂಗುರ್ಡಿ,
ನಂದೀಶ್, ಎಚ್.ಎಸ್.ಸುಬ್ರಹ್ಮಣ್ಯ, ನಡುತೋಟ ಸತೀಶ್, ತನಿಕೋಡು ಮಂಜುನಾಥ್ ನಾಯ್ಕ, ಪದ್ಮನಾಭ ಹೆಗಡೆ, ಗೋಳ್ಗೋಡು ಚಂದ್ರಶೇಖರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net