ರೈತರಿಗೆ ಜಮೀನು ಬಿಟ್ಟುಕೊಡಿ

17 yelandur 02
ಯಳಂದೂರು, ಚಾಮರಾಜನಗರದ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯದಂಚಿನ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಕೂಡಲೇ ಇದನ್ನು ರೈತರಿಗೆ ಬಿಟ್ಟುಕೊಡಬೇಕೆಂದು ವೀರಭದ್ರೇಶ್ವರ ರೈತ ಹೋರಾಟ ಸಮಿತಿ ಸದಸ್ಯರು ಬುಧವಾರ ಮನವಿ ಪತ್ರ ಸಲ್ಲಿಸಿದರು.
Published on

ಯಳಂದೂರು: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವ ದರಖಾಸ್ತು, ಪಟ್ಟ ಜಮೀನುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದು, ಈ ಜಮೀನುಗಳನ್ನು ಮತ್ತೆ ರೈತರಿಗೆ ಬಿಟ್ಟುಕೊಡಬೇಕೆಂದು ವೀರಭದ್ರೇಶ್ವರ ರೈತ ಹೋರಾಟ ಸಮಿತಿಯ ಸದಸ್ಯರು ಬುಧವಾರ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪಾ ಆರ್. ಕಾಂಟ್ರಾಕ್ಟರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.


ವೀರಭದ್ರೇಶ್ವರ ರೈತ ಹೋರಾಟ ಸಮಿತಿ ಅಧ್ಯಕ್ಷ ಗ್ರಾಪಂ ಸದಸ್ಯ ಡಿ.ಸಿ.ಬಾಬು ಮಾತನಾಡಿ, ಇವೆರಡುವ ತಾಲೂಕಿನ ಗಂಗವಾಡಿ, ದಾಸನಹುಂಡಿ, ಯರಗಂಬಳ್ಳಿ, ಕೊಮಾರನಪುರ, ಗಣಿಗನೂರು, ಚಂಗಚಹಳ್ಳಿ, ಯಳಂದೂರು, ಮಸಣಾಪುರ, ಗ್ರಾಮಗಳಿಗೆ ಸೇರಿದ ಸರ್ವೇ ನಂ.4/ಪಿ1 ರಿಂದ 4/ಪಿ.63 ರವರೆಗಿನ 266 ಎಕರೆ, 5/ಪಿ1 ರಿಂದ 5/ಪಿ22 ರವರೆಗೆ 84 ಎಕರೆ ಜಮೀನು ಈ ಗ್ರಾಮದ ಬಿಆರ್‌ಟಿ ಕಾಂಡಚಿನಲ್ಲಿದೆ. 2017 ರಲ್ಲಿ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪದೇಶವಾಗಿ ಘೋಷಣೆಯಾದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಮುಂದೆ ಇದನ್ನು ನೀವೇ ಬಳಸಿಕೊಳ್ಳಬಹುದೆಂದು ಹೇಳಿದ್ದರು. ಆದರೆ ಈಗ ಇಲ್ಲಿ ಸಾಗುವಳಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಇಲ್ಲಿನ ಹತ್ತಾರು ರೈತರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ರೈತರು ವ್ಯವಸಾಯವನ್ನೇ ಮುಖ್ಯ ಕಸುಬಾಗಿ ಮಾಡಿಕೊಂಡಿದ್ದು, ಇದನ್ನು ಬಿಟ್ಟರೆ ಅನ್ಯ ಮಾರ್ಗವಿಲ್ಲದೆ ಪರಿತಪಿಸುವ ಪರಿಸ್ಥಿತಿ ಇದೆ. ಕೂಡಲೇ ಈ ಜಮೀನಿನಲ್ಲಿ ವ್ಯವಸಾಯ ಮಾಡಲು ರೈತರಿಗೆ ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಹುಲಿ ಯೋಜನೆ ನಿರ್ದೇಶಕ ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ಈ ವಿಷಯದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸೂಕ್ತ ಕ್ರಮವನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ವೀರಣ್ಣ, ರಂಗನಾಯಕ, ರಾಮೇಗೌಡ, ಲಿಂಗೇಗೌಡ, ನಾಗಮಾದಯ್ಯ, ವಿ.ರಂಗಯ್ಯ, ತಮ್ಮಣ್ಣ, ಕೃಷ್ಣಯ್ಯ, ರಾಚಯ್ಯ, ಶ್ರೀನಿವಾಸಪ್ರಸಾದ್, ಜೆ.ಕೆ.ನಟರಾಜು, ರಾಚಯ್ಯ, ದೇವರಾಜು, ನಂಜುಂಡಸ್ವಾಮಿ, ಸುರೇಶ್, ನಾಗರಾಜು, ನಾರಾಯಣ, ಮಹದೇವಯ್ಯ, ಪ್ರಸಾದ್ ಸೇರಿದಂಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net