ರೈತರಿಗೆ ಕಂಟಕವಾದ ಕಸ್ಕೂಟ್ ಬಳ್ಳಿ

klb1
Published on

ಚಿಂಚೋಳಿ: ತಾಲೂಕಿನ ಬಹುತೇಕ ರೈತರ ಹೊಲಗಳಲ್ಲಿ ಕಸ್ಕೂಟ್ ಬಳ್ಳಿ ಹಬ್ಬಿದ್ದರಿಂದ ರೈತರು ಮತ್ತೆ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಯುನಿಟಿ ಆಫ್ ಮೂಲನಿವಾಸಿ ಹೋರಾಟಗಾರ ಗೋಪಾಲ ಎಂ.ಪಿ. ಆಗ್ರಹಿಸಿದ್ದಾರೆ.

ಈ ಬಳ್ಳಿ ತಾಲೂಕಿನ ಗಾರಂಪಳ್ಳಿ, ತಾಜಲಾಪುರ, ಕನಕಪುರ ಸೇರಿಂತೆ ಅನೇಕ ಗ್ರಾಮಗಳ ರೈತರ ಹೊಲದಲ್ಲಿ ಕಂಡುಬAದಿದ್ದು, ಈಗಾಗಲೇ ತಾಜಲಾಪುರ ಗ್ರಾಮದಲ್ಲಿ ಬೆಳೆಯನ್ನೆ ಕಿತ್ತು ಹಾಕುವ ಸ್ಥಿತಿಗೆ ಬಂದಿದೆ. ಇದು ಹೆಚ್ಚಾಗಿ ಹೆಸರು, ಉದ್ದು ಮತ್ತು ತೊಗರೆ ಬೆಳೆಗೆ ಸುತ್ತುಕೊಂಡು ಮುಂದೆ ಬೆಳೆ ಬೆಳೆಯದಂತೆ ತಡೆವಡ್ಡುತ್ತದೆ. ಇದರಿಂದ ಇಳುವರಿಯಲ್ಲಿ ಕುಂಠಿತಗೊAಡು ರೈತರ ತೀವ್ರ ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗಾರಂಪಳ್ಳಿ ಗ್ರಾಮದ ರೈತ ಶಿವಕುಮಾರ ಅಂಬಲಗಿ ಅವರ ನಾಲ್ಕು ಎಕರೆ ಹೊಲದ ತುಂಬೆಲ್ಲ ಇದೇ ರೀತಿ ಕಸ್ಕೂಟ್ ಬಳ್ಳಿ ಸುತ್ತುವರಿದಿದ್ದು, ತಕ್ಷಣಕ್ಕೆ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ತಜ್ಞರು ಈ ಹೊಲಕ್ಕೆ ಭೇಟಿ ನೀಡಿ ಇದಕ್ಕೆ ತಕ್ಕನಾದ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಈ ಭಾಗದ ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net