ರೈತರಿಗೆ ಆತಂಕ ತಂದ ಉತ್ರಿ ಮಳೆ

ydg02
Published on

ಕೊಡೇಕಲ್: ವಲಯದ ಕೆಲ ಗ್ರಾಮಗಳಲ್ಲಿ ಕಳೆದ ಮೂರು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅತಿಯಾದ ಮಳೆಯಿಂದಾಗಿ ಬೆಳೆಗಳು ಒಣಗಲಾರಂಭಿಸಿವೆ.

ನಿರAತರ ಮಳೆಯಿಂದ ರೈತರಿಗೆ ಹೊಲದಲ್ಲಿ ಕೆಲಸ ಮಾಡಲು ಬಿಡದೆ ಇತ್ತ ನಿತ್ಯ ಹಾಲು, ಪತ್ರಿಕೆ ಮತ್ತು ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ತೀವ್ರ ತೊಂದರೆ ತಂದೊಡ್ಡಿದೆ. ಅಲ್ಲದೆ ಶಾಲಾ ಮಕ್ಕಳು ಪರಿತಪ್ಪಿಸುವಂತಾಗಿದೆ. ಬಸ್, ಖಾಸಗಿ ವಾಹನಗಳನ್ನು ಹತ್ತಿ ಶಾಲೆ ತಲುಪವಷ್ಟರಲ್ಲಿ ದೊಡ್ಡ ಹರಸಾಹಸ ಪಡುವಂತಾಗಿದೆ. ಇದು ಸಾಲದೆಂಬAತೆ ಕೆಲ ಶಾಲೆಗಳ ಮೈದಾನಗಳು ಕೆರೆಯಂತಾಗಿವೆ.

ಮಳೆಯಾಗುತ್ತಿಲ್ಲ ಎಂದು ರೈತರು ಕಾಲುವೆ ನೀರು ಬೆಳೆಗೆ ಹರಿಸಿದ್ದರು. ಆದರೆ ಈಗ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗೆ ತೇವಾಂಶ ಹೆಚ್ಚಾದ ಕಾರಣ ಬೆಳೆಗಳು ಒಣಗಲಾರಂಭಿಸಿವೆ. ಅಲ್ಲದೆ ಮೆಣಸಿನ ಬೆಳೆ ರೋಗಕ್ಕೆ ತುತ್ತಾಗಿವೆ.

ಒಟ್ಟಾರೆಯಾಗಿ ಉತ್ರಿ ಬಿಳಿಜೋಳ ಬಿತ್ರಿ ನಾ ಬರದಿದ್ರ ನೀವು ಸತ್ರಿ ಎಂದು ರೈತರಿಗೆ ಭಾಷೆ ನೀಡಿದ್ದ ಉತ್ರಿ ಮಳೆ ಇದೀಗ ಬೆಂಬಿಡದೆ ಸುರಿಯುವ ಮೂಲಕ ರೈತರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದ್ದು ಮಾತ್ರ ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net