

ಬಾಗೂರು: ಎಂ.ಶಿವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 1140 ರೈತರಿಗೆ 7.74 ಕೋಟಿ ರೂ. ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲ ವಿತರಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಎಂ.ಶಿವರದಲ್ಲಿ 55 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿ, 105 ರೈತರಿಗೆ 85 ಲಕ್ಷ ರೂ.ಸಾಲ, 16 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 20 ಲಕ್ಷ ಸಾಲ ರೂ.ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಒಟ್ಟು 26 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ 78 ಲಕ್ಷ ರೂ.ಸಾಲ ನೀಡಲಾಗಿದೆ. 13 ರೈತರಿಗೆ 1 ಕೋಟಿ ರೂ.ಮಧ್ಯಮ ಅವಧಿ ಸಾಲ ನೀಡಲಾಗಿದೆ. ಸಹಕಾರ ಸಂಘದಿಂದ 6 ಕೋಟಿ ರೂ.ರೈತರ ಸಾಲ ಮನ್ನಾವಾಗಿದೆ. ತಾಲೂಕಿನಲ್ಲಿ 47 ಸಾವಿರ ರೈತರಿಗೆ ಸಹಕಾರ ಸಂಘಗಳ ಮೂಲಕ 280 ಕೋಟಿ ರೂ.ಸಾಲ ವಿತರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ 175 ಕೋಟಿ ರೂ.ಸಾಲ ಮನ್ನಾವಾಗಿದೆ. ತಾಲೂಕಿನ ರೈತರಿಗೆ ಅನುಕೂಲವಾಗಿದೆ. ಕೊಬ್ಬರಿ ಖರೀದಿ ಕೇಂದ್ರ ಆರಂಭವಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಅನಿಲ್ ಕುಮಾರ್, ಉಪಾಧ್ಯಕ್ಷೆ ಕಾಳಮಾರನಹಳ್ಳಿ ರೇಖಾ, ನಂಜೇಶ್ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್.ಶಿವಣ್ಣ, ವಿ.ಎನ್.ಮಂಜುನಾಥ್, ಎಂ.ಬಿ.ತಿಮ್ಮೇಗೌಡ, ಮುಖಂಡರಾದ ವೆಂಕಟೇಶ್, ಮರಿದೇವೇಗೌಡ, ಭೂದೇಶ್, ಪುರುಷೋತ್ತಮ್, ಮಂಜುನಾಥ್, ಎನ್.ಬಸವರಾಜ್, ತಿಮ್ಮೇಗೌಡ, ಮೇಲ್ವಿಚಾರಕ ಮಧು, ಕಾರ್ಯ ನಿರ್ವಹಣಾಧಿಕಾರಿ ಎಂ. ಎನ್.ದಿನೇಶ್, ನಿರ್ದೇಶಕರಾದ ಮಂಜೇಗೌಡ, ಸೋಮಣ್ಣ, ಶಂಕರ್, ಶೈಲಾ ಕುಮಾರಿ, ಶಂಕ್ರಯ್ಯ, ಶಿವಣ್ಣ, ಭೀಮರಾಜ್, ಹೇಮಲತಾ, ನಿಂಗೇಗೌಡ ಇತರರು ಇದ್ದರು.