ರೈತರಲ್ಲಿ ಸಮಾಧಾನ ಮೂಡಿಸಿದ ಉತ್ತರಿ ಮಳೆ

03
Published on

ಕೊಡೇಕಲ್ : ನನ್ ಹೆಸ್ರು ಉತ್ತರಿ, ಬಿಳಿಜೋಳ ಬಿತ್ತರಿ, ನಾ ಬರದಿದ್ದರೆ ನೀವು ಸತ್ತಿರಿ… ಎಂದು ರೈತರಿಗೆ ಭಾಷೆ ನೀಡಿದ ಮಳೆಯೆಂದೇ ಹೆಸರುವಾಸಿಯಾದ ಉತ್ತರಿ ಶುಕ್ರವಾರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಸುರಿದು ರೈತರಲ್ಲಿ ಚೈತನ್ಯ ತುಂಬಿದೆ.

ಮೋಡಕವಿದ ವಾತಾವರಣ ಮಳೆಯ ಮುನ್ಸೂಚನೆ ನೀಡಿತ್ತು. ಆದರೂ ದಿಢೀರ್ ಮೋಡ ಕರಗಿದ್ದರಿಂದ ರೈತರು ಚಿಂತಿತರಾಗಿದ್ದರು. ಬಳಿಕ ಸಂಜೆಯಿAದ ರಾತ್ರಿವರೆಗೆ ಸುರಿದ ಗುಡುಗುಸಹಿತ ಮಳೆ ತೇವಾಂಶ ಕೊರತೆಯಿಂದ ಸೊರಗುತ್ತಿದ್ದ ಹೂ ಬಿಡುವ ಹಂತದ ತೊಗರಿ ಬೆಳೆಗೆ ಶಕ್ತಿ ತುಂಬಿದೆ. ಸಕಾಲಕ್ಕೆ ರೈತರ ಕೈಹಿಡಿದ ಮಳೆರಾಯ ಆತಂಕ ದೂರ ಮಾಡಿ ಬಿಳಿ ಜೋಳ ಮತ್ತು ಕಡಲೆ ಬಿತ್ತನೆಗೂ ಅನುವು ಮಾಡಿಕೊಟ್ಟಿದ್ದಾನೆ.

ಮುಂಗಾರು ಹಂಗಾಮಿನ ಅಲ್ಪಸ್ವಲ್ಪ ಮಳೆ ಆಶ್ರಯದಲ್ಲಿಯೇ ರೈತರು ಹತ್ತಿ, ತೊಗರಿ, ಸರ‍್ಯಕಾಂತಿ, ಸಜ್ಜೆ ಬಿತ್ತನೆ ಮಾಡಿದ್ದರು. ಸದ್ಯ ಮಳೆಯಾಗದಿದ್ದರೆ ತೊಗರಿ ಹೂ ಬಿಡುವುದು ಅನುಮಾನ ಎಂಬ ಚಿಂತೆಯಾಗಿತ್ತು. ಸರಿಯಾದ ಸಮಯಕ್ಕೆ ಮಳೆಯಾಗಿದ್ದು, ದೇವರು ಕೈಹಿಡಿದಿದ್ದಾನೆ ಎಂದು ರೈತರಾದ ಶಂಕರಗೌಡ ಜೇವರ್ಗಿ, ಶ್ರೀಶೈಲ ಸಜ್ಜನ್, ಬುದ್ದಣ್ಣ ಬಿಳೇಬಾವಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net