ರೈತರನ್ನು ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಯಲಿ

Oplus_131072
ಕಾಳಗಿಯ ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನೀಲಕಂಠ ಕಾಳೇಶ್ವರ ಪುರಾಣ ಮಹಾ ಮಂಗಲ ಕಾರ್ಯಕ್ರಮವನ್ನು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಡಾ.ಲಿಂಗರಾಜಪ್ಪ ಅಪ್ಪ, ಸಾಗರ ಖಂಡ್ರೆ, ರಾಜೇಶ ಗುತ್ತೇದಾರ್ ಇತರರಿದ್ದರು.
Published on

ಕಾಳಗಿ: ಹಸಿದ ಹೊಟ್ಟೆಗೆ ಅನ್ನ ನೀಡುವ ರೈತರೇ ನಿಜವಾದ ದೇವರಾಗಿದ್ದು, ಅವರನ್ನು ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಯಬೇಕು. ಅಂದಾಗಲೇ ನಾಡು ಸಮೃದ್ಧಿಯಾಗಿರಲು ಸಾಧ್ಯ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

ಶ್ರೀನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ನೀಲಕಂಠ ಕಾಳೇಶ್ವರ ಪುರಾಣ ಮಹಾಮಂಗಲ ಹಾಗೂ ರೈತರ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಪುರಾಣ, ಪುಣ್ಯ ಕಥೆಗಳನ್ನು ನಿರಂತರ ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದರ ಜತೆಗೆ ಮನಸ್ಸಿಗೆ ಪ್ರಪುಲ್ಲತೆ ಸಿಗುತ್ತದೆ. ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲೆಡೆ ಭಗವಂತ ಇರಲು ಸಾಧ್ಯವಿಲ್ಲ, ಭಕ್ತಿಯಿಂದ ಪ್ರಾರ್ಥನೆ ಮಾಡುವವರಿಗೆ ದೇವರ ಅಸ್ತಿತ್ವದ ಅನುಭವ ಆಗುತ್ತದೆ ಎಂದು ಹೇಳಿದರು.

ಬೀದರ್ ಸಂಸದ ಸಾಗರ ಖಂಡ್ರೆ ಮಾತನಾಡಿ, ಸಮಾಜದಲ್ಲಿ ಜೀವಿಸುವ ನಾವು ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು. ಪುರಾಣ ಪ್ರಸಿದ್ಧ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಶಿಲ್ಪಕಲೆ ಹಾಗೂ ಪುಷ್ಕರಣಿಗಳಿಂದ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ. ದೇವಸ್ಥಾನ ಹಾಗೂ ರೌದ್ರಾವತಿ ನದಿ ಅಭಿವೃದ್ಧಿಗೆ ಸಂಸದರ ನಿಧಿಯಿಂದ ೧೦ ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಡಾ.ಲಿಂಗರಾಜಪ್ಪ ಅಪ್ಪ, ನೀಲಕಂಠ ಕಾಳೇಶ್ವರ ಪುರಾಣ ಮತ್ತು ಜಾತ್ರೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಗುತ್ತೇದಾರ್, ಆದಾಯ ತೆರಿಗೆ ಇಲಾಖೆ ಉಪ ನಿರ್ದೇಶಕ ಆನಂದ ರಟಕಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿದರು.

ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಸೊಂತದ ಶ್ರೀ ಅಭಿನವ ಶರಣ ಶಂಕರಲಿಂಗ ಮಹಾರಾಜ, ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ್, ಜಿಪಂ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ್ ಮರತೂರ, ಅರುಣಕುಮಾರ ಪಾಟೀಲ್, ಹಫೀಸ್ ರಂಜೋಳ, ತಾಪಂ ಇಒ ಡಾ.ಬಸವಲಿಂಗಪ್ಪ ಡಿಗ್ಗಿ, ಪ್ರಮುಖರಾದ ರಾಜುಗೌಡ ತರನಳ್ಳಿ, ಚೇತನ ಗೋನಾಯಕ, ಮಲ್ಲಿನಾಥ ಹಿರೇಮಠ, ದೇವಿಂದ್ರಪ್ಪ ಜಂಬಗಾ ಇತರರಿದ್ದರು.

ಶಿವಯ್ಯಸ್ವಾಮಿ ಶಾಸ್ತ್ರಿ ಪುರಾಣ ನೀಡಿದರು. ಆನಂದ ಚಿಮಣಗೇರಾ, ಮಹೇಶ ತುಪ್ಪದ, ಸಂತೋಷಕುಮಾರ ಕೋಡ್ಲಿ, ಷಣ್ಮುಖಯ್ಯಸ್ವಾಮಿ ಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಸಂತೋಷ ಪತಂಗೆ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net