ರೈತರ ಹಿತಾಸಕ್ತಿಯೇ ನಮ್ಮ ಧ್ಯೇಯ

06-4
ಲೈಲಾ ಶುಗರ್ಸ್‌ನಲ್ಲಿ ಬಾಯ್ಲರ್ ಪ್ರದೀಪನಕ್ಕೆ ಚಾಲನೆ ನೀಡಲಾಯಿತು. ಚನ್ನಬಸವ ದೇವರು, ವಿಠ್ಠಲ ಹಲಗೇಕರ, ರುಕ್ಮಿಣಿ ಹಲಗೇಕರ, ಸಂಜಯ ಕುಬಲ ಇತರರು ಇದ್ದರು.
Published on

ಖಾನಾಪುರ, ಬೆಳಗಾವಿ: ಲೈಲಾ (ಭಾಗ್ಯಲಕ್ಷ್ಮಿ) ಸಕ್ಕರೆ ಕಾರ್ಖಾನೆ ಸ್ಥಾಪನೆಯ ಹಿಂದಿನ ಮುಖ್ಯ ಉದ್ದೇಶ ಸ್ಥಳೀಯ ರೈತರ ಹಿತಾಸಕ್ತಿ. ಕಬ್ಬು ಬೆಳೆಗಾರರಿಗೆ ಯಾವುದೇ ತೊಂದರೆಯಿಲ್ಲದೆ ದರ ನೀಡಲು ಬೆವರಿನ ನ್ಯಾಯಯುತ ದರ ನೀಡಲು ನಾವು ಆದ್ಯತೆ ನೀಡುತ್ತೇವೆ ಎಂದು ಮಹಾಲಕ್ಷ್ಮೀ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಹಲಗೆಕರ ಹೇಳಿದರು.

ವಿಜಯದಶಮಿ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಲೈಲಾ ಕಾರ್ಖಾನೆಯ ಬಾಯ್ಲರ್ ಬೆಳಗುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಉತ್ತಮ ದರ ನೀಡಲು ಕಾರ್ಖಾನೆ ಸದಾ ಒತ್ತು ನೀಡುತ್ತಿದೆ. ಈ ವರ್ಷದ ಕಟಾವು ಅ.11 ರಿಂದ ಪ್ರಾರಂಭವಾಗಲಿದ್ದು, ರೈತರು ಸ್ಥಳೀಯ ಕಾರ್ಖಾನೆಗೆ ಕಬ್ಬು ಕಳುಹಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಂಡಿ ಸದಾನಂದ ಪಾಟೀಲ ಮಾತನಾಡಿ, ಅ. 11 ರಂದು ಬೆಳಗ್ಗೆ 10 ಗಂಟೆಗೆ ರೈತರಿಗೆ ಕೃಷಿ ತಜ್ಞರು ಈ ಹೊಸ ಕೃಷಿ ತಂತ್ರದ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಇದೇ ದಿನ ಕಾರ್ಖಾನೆಯ ಸಂಸ್ಥಾಪಕ ದಿ. ನೀಲಕಂಠರಾವ ಸರ್ದೇಸಾಯಿ ಅವರ ಪುತ್ಥಳಿ ನಿರ್ಮಾಣ ಕೆಲಸದ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಅವರೋಳಿ ಮಠಾಧೀಶ ಚನ್ನಬಸವ ದೇವರು ದಿವ್ಯ ಸಾನ್ನಿಧ್ಯದಲ್ಲಿ, ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಹಲಗೇಕರ ಹಾಗೂ ರುಕ್ಮಿಣಿ ಹಲಗೇಕರ ನೇತೃತ್ವದಲ್ಲಿ ಹೋಮ ಹವನ ಹಾಗೂ ಪೂಜಾ ಕಾರ್ಯಕ್ರಮ ಜರುಗಿದವು. ಬಳಿಕ ಬಾಯ್ಲರ್ ಬೆಳಗಿ ಪೂಜೆ ಸಲ್ಲಿಸಲಾಯಿತು.

ಭರಮಾಣಿ ಪಾಟೀಲ, ಲಕ್ಷ್ಮಣ ತಿರವೀರ, ಚಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ನಾಗೇಶ ಜೋಗೋಜಿ, ಮಹಾದೇವ ಬಂದಿವಡೇಕರ, ಬಾಳಾಸಾಹೇಬ ಶೇಲಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net