

ಕಂಪ್ಲಿ: ಕಣವಿ ತಿಮ್ಮಲಾಪುರದಿಂದ ಪಂಪಾವಿದ್ಯಾಪೀಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿನ ವಾಚ್ ಟವರ್ ಬಳಿ ರಸ್ತೆ ಮಧ್ಯೆ ಬೊಂಗಾ ಶನಿವಾರ ದುರಸ್ತಿಗೊಳಿಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ರಸ್ತೆ ಪಕ್ಕದಲ್ಲಿ ಗುಡ್ಡದಿಂದ ಹರಿದು ಬರುವ ನೀರಿನ ರಭಸಕ್ಕೆ ರಸ್ತೆ ಮಧ್ಯೆ ಬೊಂಗಾ ಬಿದ್ದಿದೆ. ರಸ್ತೆ ಕೆಳಗೆ ಅಂತರ್ಗತವಾಗಿ ಎಲ್‌ಎಲ್ ಕಾಲುವೆ ಹರಿಯುತ್ತಿದ್ದು, ಮೇಲ್ಭಾಗದಲ್ಲಿ 20 ಅಡಿ ಆಳದಷ್ಟು ಬೊಂಗಾ ಬಿದ್ದಿತ್ತು ಎಂದರು.
ಅರಣ್ಯ ಅಧಿಕಾರಿ ಕೆ.ಎನ್.ದಿವಾಕರ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಎಇಇ ನಾಗಪ್ಪ ಅರ ಗಮನಕ್ಕೆ ತಂದು ದುರಸ್ತಿಗೆ ನಿರಂತರ ಒತ್ತಾಯಿಸಿದ ಪರಿಣಾಮವಾಗಿ ಇದೀಗ ದುರಸ್ತಿಗೊಳಿಸಿದ್ದಾರೆ. ರಸ್ತೆ ಕೆಳಗಡೆ ಇದೀಗ ಪೈಪ್ ಅಳವಡಿಸಿ ಗುಡ್ಡದ ನೀರನ್ನು ಪೈಪಿನ ಮೂಲಕ ಹರಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಅರಣ್ಯ ಅಧಿಕಾರಿಗಳು, ನೀರಾವರಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾಧಿಕಾರಿಗಳು ರಸ್ತೆ ನಿರ್ವಹಣೆಯ ಮೇಲೆ ನಿಗಾವಹಿಸಬೇಕು, ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಕಣವಿ ತಿಮ್ಮಲಾಪುರದ ರೈತ ರಕ್ಕಪ್ಪ, ದರೋಡಿ ಕರಡಿಧಾಮದ ಬೀಟ್ ಫಾರೆಸ್ಟರ್ ಕೆ.ಎನ್.ದಿವಾಕರ್ ಇತರರಿದ್ದರು.