ರೈತರ ಹಿತಕ್ಕಾಗಿ ಪಾದಯಾತ್ರೆ

20210102_114025
Published on

ವಿಜಯಪುರ: ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಇದೆ ತಿಂಗಳು 20 ರಿಂದ ವಿಜಯಪುರ ಜಿಲ್ಲೆಯ ಬಸವನ ಬಾಗೇವಡಿಯಿಂದ ಉತ್ತರ ಕರ್ನಾಟಕ ರೈತ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ. ಸಂಘದ ರಾಜ್ಯಾಧ್ಯಕ್ಷ ಯಾಸೀನ ಜವಳಿ ನೇತೃತ್ವದಲ್ಲಿ ನಡೆಯಲಿರುವ ಪಾದಾಯಾತ್ರೆಗೆ ಉತ್ತರ ಕರ್ನಾಟಕದ ವಿವಿಧ ಮಠಾಧೀಶರು ಬೆಂಬಲ‌ ಸೂಚಿಸಿದ್ದಾರೆ. ಉತ್ತರ ಕರ್ನಾಟಕದ ನಿರ್ಲಕ್ಷ ಖಂಡಿಸಿ ಪಕ್ಷಾತೀತವಾಗಿ ನಡೆಯಲಿರುವ ಪಾದಯಾತ್ರೆ ಬೆಂಗಳೂರಿನ ವರೆಗೂ ಪಾದಯಾತ್ರೆ ಮೂಲಕವೇ ನಡೆಯಲಿದೆ. ಇದುವರೆಗೂ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳಿಂದಲೂ ಉತ್ತರ ಕರ್ನಾಟಕಕ್ಕೆ ನಿರ್ಲಕ್ಷವಾಗಿದೆ. ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅನ್ಯಾಯವಾಗುತ್ತಲೇ ಬಂದಿದೆ. ಹಾಗಾಗಿ ಇದನ್ನು ಖಂಡಿಸಿ ಪಾದಾಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷ ಯಾಸೀನ ಜವಳಿ‌ ತಿಳಿಸಿದ್ರು. ಈ ಪಾದಯಾತ್ರೆಗೆ ಸಂಗನಬಸವ ಶಿವಾಚಾರ್ಯ ಸ್ವಾಮಿಜಿ, ಸಿದ್ಧರಾಮ ಮಹಾಸ್ವಾಮಿಗಳು, ಸಿದ್ಧಲಿಂಗ ಸ್ವಾಮೀಜಿಗಳು, ಗುರುಶಾಂತವೀರ ಸ್ವಾಮೀಜಿಗಳು, ಶಿವಪ್ರಕಾಶ ಸ್ವಾಮೀಜಿಗಳು ಸೇರಿದಂತೆ 8ಕ್ಕೂ ಅಧಿಕ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net