ರೈತರ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿ

22 kkr1(8-23
Published on

ಕಿಕ್ಕೇರಿ: ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಹಾಗೂ ರೈತರು ಸ್ವಾವಲಂಭಿಯಾಗಿ ಬದುಕಲು ಹೈನುಗಾರಿಕೆ ಸಹಕಾರಿ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.


ಹೋಬಳಿಯ ಮಾದಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗರ ಬದುಕು ಸುಧಾರಿಸಲು ಹೈನುಗಾರಿಕೆ ಕಾರಣವಾಗಿದೆ. ಮಳೆ ಕೈಕೊಟ್ಟಿದೆ, ಇರುವ ಬೆಳೆ ಒಣಗುತ್ತಿದೆ. ಮನೆಗೊಂದು ರಾಸು ಕಟ್ಟಿಕೊಂಡು ಹೈನುಗಾರಿಕೆಯನ್ನು ಕಸುಬಾಗಿ ಸ್ವೀಕರಿಸಿ ಎಂದರು.


ಮಳೆ ನಂಬಿ ಬದುಕುವುದು ಕಷ್ವವಾಗಿರುವಾಗ ರೈತರು ತಮ್ಮ ಜಮೀನುಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಅಂರ್ತಜಲ ವೃದ್ಧಿಸಿಕೊಳ್ಳಲು ಮುಂದಾಗುವುದರ ಜತೆಗೆ ಹನಿ ನೀರಾವರಿಗೆ ಒತ್ತು ನೀಡಿ ಎಂದು ಸಲಹೆ ನೀಡಿದರು.


ಮನ್‌ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಹಾಲಿಗೆ ನೀರು ಹಾಕಬೇಡಿ, ಕಲಬೆರಕೆ ಮಾಡಿ ಹೆಸರು ಕೆಡಿಸದಿರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿಕೊಳ್ಳದೆ ನಿರ್ದೇಶಕರು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದು ಮನವಿ ಮಾಡಿದರು.


ಗ್ರಾಮದಲ್ಲಿ 27ವರ್ಷ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಗೋವಿಂದರಾಜು ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷೆ ಲಾವಣ್ಯ, ಉಪಾಧ್ಯಕ್ಷೆ ರೇಣುಕಾ, ಉಪ ವ್ಯವಸ್ಥಾಪಕ ನಾಗಪ್ಪ ಅಲ್ಲಿಬಾದಿ, ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ, ನಿರ್ದೇಶಕರಾದ ಉಮಾದೇವಿ, ಅನುಸೂಯಾ, ಪ್ರೇಮಾ, ಭಾಗ್ಯಮ್ಮ, ಮಮತಾ, ಮಂಜುಳಾ, ಗೌರಮ್ಮ, ಕಮಲಾಕ್ಷಿ, ಲತಾ, ಗ್ರಾಪಂ. ಸದಸ್ಯ ಶ್ರೀಧರ್, ಮಾಜಿ ಸದಸ್ಯ ತುಳಸೀರಾಂ, ಮುಖಂಡ ಪ್ರಶಾಂತ್, ಶಿಕ್ಷಕ ಗೋವಿಂದರಾಜು, ಕಾರ್ಯದರ್ಶಿ ಸವಿತಾ, ಹಾಲು ಪರಿವೀಕ್ಷಕಿ ಭಾರತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net