ರೈತರ ಸಾಲ ಮನ್ನಾ ಮಾಡಲಿ

10Mgkd1
Published on

ಮುಗಳಖೋಡ: ರೈತರ ಸಾಲಮನ್ನಾ, ಕಬ್ಬಿಗೆ ಬೆಂಬಲ ಬೆಲೆ, ಹಗಲು 12 ಗಂಟೆ ವಿದ್ಯುತ್, ಡಾ. ಸ್ವಾಮಿ ರಂಗನಾಥ ವರದಿ ಜಾರಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.

ಅಧಿವೇಶನ ಹಿನ್ನೆಲೆಯಲ್ಲಿ ಡಿ.16ರಂದು ಹಮ್ಮಿಕೊಂಡಿರುವ ಪ್ರತಿಭಟನೆ ನಿಮಿತ್ತ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಕಬ್ಬು ಕಟಾವು ಮಾಡುವಾಗ ಸಾವನ್ನಪ್ಪಿದವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರಿಗೆ ಶಿಷ್ಯವೇತನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಚಿಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ರಾಯಬಾಗ ತಾಲೂಕಾಧ್ಯಕ್ಷ ರಮೇಶ ಕಲ್ಲಾರ, ರೈತ ಮುಖಂಡರಾದ ರಮೇಶ ಪಾಟೀಲ, ಗುರುನಾಥ ಹೆಗಡೆ, ಜ್ಞಾನೇಶ್ವರ ಅಳಗೋಡಿ, ಅಶೋಕ ಗಸ್ತಿ, ಸಂತೋಷ ಬೆಳ್ಳಕ್ಕಿ, ಮುತ್ತಪ್ಪ ಗಸ್ತಿ, ಲಕ್ಷ್ಮಣ ತುಕ್ಕಾನಟ್ಟಿ, ಪಾಂಡು ಬಿರಣಗಟ್ಟಿ, ವಿವೇಕ ಸಣದಿ, ಶ್ರೀಶೈಲ ಸುಂಕದ, ಸಿದ್ದರಾಮ ನಾಯಿಕ, ಶ್ರವಣಕುಮಾರ ದೇವಮಾಣೆ, ಈರಣ್ಣ ಪಾಟೀಲ, ರಮೇಶ ಚೌಗಲಾ, ಮಾಯಪ್ಪ ಲೋಕುರೆ, ಶ್ರೀಕಾಂತ ಗೇನಣ್ಣವರ, ಧರೆಪ್ಪ ಮಂಗಳೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net